ಈಗೀಗ ಸೆಲೆಬ್ರೆಟಿಗಳು ದಂತಕಥೆಗಳಾಗಿರುವ ಹೆಸರಾಂತ ವ್ಯಕ್ತಿತ್ವಗಳ ಬಯೋಪಿಕ್ ಗಳನ್ನು ತೆರೆಗೆ ತರುವಲ್ಲಿ, ಆ ಸಿನಿಮಾಗಳಲ್ಲಿ ಅಭಿನಯಿಸುವುದರಲ್ಲಿ ಅಗತ್ಯಕ್ಕಿಂತ ಹೆಚ್ಚೇ ನಿರತರಾಗಿದ್ದಾರೆ. ಸದ್ಯದ ಸುದ್ದಿ ಏನಂದ್ರೆ ಬಾಲಿವುಡ್ ನಟಿ ವಿದ್ಯಾಬಾಲನ್ ಇನ್ನೊಂದು ಬಯೋಪಿಕ್ ಗೆ ಓಕೆ ಮಾಡಿದ್ದಾರಂತೆ. ಸಿಲ್ಕ್ ಸ್ಮಿತಾ ಜೀವನಾಧಾರಿತವಾಗಿ ತೆರೆಗೆ ಬಂದ ಡರ್ಟಿ ಪಿಕ್ಚರ್ ಸಿನಿಮಾದಲ್ಲಿನ ಅಭಿನಯಕ್ಕಾಗಿ ಪ್ರಶಂಸೆಗೆ ಪಾತ್ರರಾಗಿದ್ದ ವಿದ್ಯಾ ಬಳಿಕ ಸೆಲೆಕ್ಟೀವ್ ಸಿನಿಮಾಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡರು. ಮದುವೆ ಬಳಿಕವೂ ಸಹ ನಟಿಯಾಗಿ ಮುಂದುವರೆದು ಇತ್ತೀಚಿಗೆ ಎನ್ ಟಿ ಅರ್ ಬಯೋಪಿಕ್ ನಲ್ಲಿ ಅವರ ಪತ್ನಿಯಾಗಿ ಟಾಲಿವುಡ್ ಗೂ ಅಡ್ಡಿಯಿಟ್ಟದ್ದೂ ಯಾರಿಗೆ ಗೊತ್ತಿಲ್ಲ.
https://twitter.com/vidya_balan/status/1125989682972483584
ಇದೀಗ ಮತ್ತೊಂದು ಸವಾಲಿನ ಪಾತ್ರಕ್ಕೆ ವಿದ್ಯಾ ಬಾಲನ್ ಸಿದ್ದವಾಗಿರೋದು ಎಲ್ಲರ ಗಮನ ಸೆಳೆದಿದೆ. ಮಾವನ ಕಂಪ್ಯೂಟರ್ ಎಂದು ಖ್ಯಾತರಾಗಿರುವ ವಿಶ್ವವಿಖ್ಯಾತ ಭಾರತೀಯ ಗಣಿತಶಾಸ್ತ್ರಜ್ಞೆ, ಜ್ಯೋತಿಷಿ, ಸಂಖ್ಯಾ ಶಾಸ್ತ್ರಜ್ಞೆ ಶಕುಂತಲಾ ದೇವಿ ಪಾತ್ರದಲ್ಲಿ ವಿದ್ಯಾ ಬಾಲನ್ ಕಾಣಿಸಿಕೊಳ್ಳಲಿದ್ದಾರೆ. ಈ ಸಂಗತಿಯನ್ನು ಸ್ವತಃ ವಿದ್ಯಾ ಬಾಲನ್ ತಮ್ಮ ಸಾಮಾಜಿಕ ಮಾಧ್ಯಮದ ಪುಟದಲ್ಲಿ ಬಹಿರಂಗಪಡಿಸಿದ್ದಾರೆ. ಈ ಸಿನಿಮಾವನ್ನು ಅನು ಮಿನನ್ ನಿರ್ದೇಶನ ಮಾಡಲಿದ್ದು, ವಿಕ್ರಂ ಮಲ್ಹೋತ್ರಾ ನಿರ್ಮಾಣ ಮಾಡಲಿದ್ದಾರೆ. 2020ರ ಸಮ್ಮರಿಗೆ ಪ್ರೇಕ್ಷಕರ ಮುಂದೆ ಈ ಸಿನಿಮಾ ಬರಲಿದೆ. ಈ ಚಿತ್ರಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳು ಶೀಘ್ರದಲ್ಲಿಯೇ ಹೊರ ಬೀಳಲಿವೆ.











































