ತಳಪತಿ ವಿಜಯ್ ಸ್ಟಾರ್ಡಮ್ ನಿಂದಷ್ಟೇ ತಮಿಳು ಸಿನಿಮಾದಲ್ಲಿ ಉಳಿದಿರೋದು!

Picture of Cinibuzz

Cinibuzz

Bureau Report

ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟರ ಪೈಕಿ ತಳಪತಿ ವಿಜಯ್ ಕೂಡ ಒಬ್ಬರು. ಕೋಟ್ಯಾಂತರ ಅಭಿಮಾನಿಗಳನ್ನು ಭಾರತವೂ ಸೇರಿದಂತೆ ವಿಶ್ವದಾದ್ಯಂತ ಹೊಂದಿರುವುದು ವಿಶೇಷವಾದದ್ದು. ಇತ್ತೀಚಿಗೆ ಮಲಯಾಳಂ ನ ನಟರೊಬ್ಬರಾದ ಸಿದ್ದಿಕ್ ವಿಜಯ್ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೇರಳ ರಾಜ್ಯವು ವಿಜಯ್ ಅವರನ್ನು ಒಬ್ಬ ಆದರ್ಶವಾಗಿ ಪರಿಗಣಿಸಿದ್ದಾರೆಯೇ ಹೊರತು ಒಬ್ಬ ಉತ್ತಮ ನಟನಾಗಿ ಅಲ್ಲ ಎಂದು ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಸಿದ್ದಿಕ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಮಲಯಾಳಂ ಸಿನಿಮಾ ಜಗತ್ತಿನಲ್ಲಿ ಮಮ್ಮೂಟಿ ಮತ್ತು ಮೋಹನ್ ಲಾಲ್ ಎಂಬ ಇಬ್ಬರು ನಿಷ್ಪಾತ ಸೂಪರ್ ಸ್ಟಾರ್ ಗಳಿದ್ದಾರೆ. ಆದರೆ ತಮಿಳಿನ ಸಿನಿಮಾ ಇಂಡಸ್ಟ್ರಿಯೂ ಮಲಯಾಳಂ ಗಿಂತ ಭಿನ್ನವಾದ ಸಿನೇರಿಯೋದಲ್ಲಿದೆ. ಅಲ್ಲಿ ವಿಜಯ್ ಒಬ್ಬ ಸೂಪರ್ ಸ್ಟಾರ್. ಆದರೆ ಆತನೇನು ಒಳ್ಳೆಯ ನಟನಲ್ಲ. ಆತನ ಸ್ಟಾರ್ಡಮ್ ನಿಂದಷ್ಟೇ ಆತ ಇಂಡಸ್ಟ್ರಿಯಲ್ಲಿ ಉಳಿದಿರೋದು. ನನಗೆ ಕಮಲ್ ಹಾಸನ್ ಒಬ್ಬ ಉತ್ತಮ ನಟ ಹಾಗೂ ಸೂಪರ್ ಸ್ಟಾರ್ ಎನಿಸುತ್ತದೆ ಎಂದಿದ್ದಾರೆ.

ಇನ್ನು ವಿಜಯ್ ನ ಮೆರ್ಸಲ್ ನಲ್ಲಿ ಪಾತ್ರ ಮಾಡಿದ್ದ ಮಲಯಾಳಂ ನ ಹರೀಶ್ ಪೆರಾಡಿ ಸಿದ್ದೀಕ್ ಅಭಿಪ್ರಾಯವನ್ನು ಕೇಳಿ, ವಿಜಯ್ ಒಬ್ಬ ನಟ ಹಾಗೂ ಸೂಪರ್ ಸ್ಟಾರ್. ಯಾರಿಗೂ ಕಮ್ಮಿ ಇಲ್ಲದ ನಟ. ಎಲ್ಲಕ್ಕಿಂತಲೂ ಮಿಗಿಲಾಗಿ ಆತನೊಬ್ಬ ಸಹೃದಯಿ ಹಾಗೂ ಒಳ್ಳೆಯ ವ್ಯಕ್ತಿತ್ವದವನು ಎಂದಿದ್ದಾರೆ. ಸದ್ಯ ವಿಜಯ್ ತಳಪತಿ 63ನಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರವನ್ನು ಅಟ್ಲಿ ನಿರ್ದೆಶನ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಎಜಿಎಸ್ ಎಂಟರ್ ಟೈನ್ ಮೆಂಟ್ ನಿರ್ಮಾಣ ಮಾಡುತ್ತಿದೆ. ವಿಜಯ್ ಗೆ ಜತೆಯಾಗಿ ನಯನತಾರಾ, ಜಾಕಿಶ್ರಾಪ್, ವಿವೇಕ್, ಯೋಗಿ ಬಾಬು, ಇಂದುಜಾ ಮತ್ತು ಕಥೀರ್ ಅಭಿನಯಿಸುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top