ಮತ್ತೆ ಒಂದಾದ ಲೇಡಿ ಸೂಪರ್ ಸ್ಟಾರ್ ಮತ್ತು ಶಿವ ಕಾರ್ತಿಕೇಯನ್!

Picture of Cinibuzz

Cinibuzz

Bureau Report

ಕಳೆದ ವರ್ಷ ಶಿವ ಕಾರ್ತಿಕೇಯನ್ ಅವರನ್ನು ಸೀಮರಾಜ ಸಿನಿಮಾದ ಮೂಲಕ ನೋಡಿದ್ದರು. ಅದಾದಮೇಲೆ ಅಭಿಮಾನಿಗಳ ಮುಂದೆ ಕಾಣಿಸದ ಶಿವ ಕಾರ್ತಿಕೇಯನ್ ನಂತರ ಅರುಣ್ ರಾಜ ಕಾಮರಾಜ್ ನಿರ್ದೇಶನದ ಸ್ಪೋರ್ಟ್ ‍ಡ್ರಾಮ ಕನ್ನಾ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರು. ಇವರಿಗೆ ಐಶ್ವರ್ಯಾ ರಾಜೇಶ್ ಜತೆಯಾಗಿದ್ದಾರೆ. ಸದ್ಯ ಈ ಸಿನಿಮಾ ರಿಲೀಸ್ ಗೆ ದಿನಗಣನೆ ಮಾಡುತ್ತಿದ್ದು ಇದೇ ತಿಂಗಳು ಸಿನಿಮಾ ರಿಲೀಸ್ ಆಗಲಿದೆ.

ಕನ್ನಾ ನಂತರ ಶಿವ ಕಾರ್ತಿಕೇಯನ್ ಮಿಸ್ಟರ್ ಲೋಕಲ್ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾವನ್ನು ರಾಜೇಶ್ ಎಂ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಕಾಡುವಲ್ ಇರುಕ್ಕನ್ ಕುಮಾರು ಸಿನಿಮಾವನ್ನು ರಾಜೇಶ್ ನಿರ್ದೇಶಿಸಿದ್ದರು. ಇನ್ನು ಶಿವ ಕಾರ್ತಿಕೇಯನ್ ಗೆ ಜತೆಯಾಗಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿನಯಿಸುತ್ತಿದ್ದಾರೆ. ಇದು ಶಿವ ಕಾರ್ತಿಕೇಯನ್ ಮತ್ತು ನಯನಾ ತಾರಾ ಎರಡನೇ ಸಿನಿಮಾವಾಗಿದ್ದು, ಈ ಮೊದಲು ಮೋಹನ್ ರಾಜಾ ನಿರ್ದೇಶನದ ವೇಳೈಕರನ್ ನಲ್ಲಿ ಅಭಿನಯಿಸಿದ್ದರು. ಮಿಸ್ಟರ್ ಲೋಕಲ್ ಸಿನಿಮಾವನ್ನು ಸ್ಟುಡಿಯೋ ಗ್ರೀನ್ ನಿರ್ಮಾಣ ಮಾಡುತ್ತಿದೆ. ಸದ್ಯದ ಸುದ್ದಿ ಏನಂದ್ರೆ ಮಿಸ್ಟರ್ ಲೋಕಲ್ ಸ್ಯಾಟಲೈಟ್ ಹಕ್ಕನ್ನು ಸನ್ ನೆಟವರ್ಕ್ ದುಬಾರಿ ಮೊತ್ತದಲ್ಲಿಯೇ ಖರೀದಿ ಮಾಡಿದೆಯಂತೆ.

ಇನ್ನಷ್ಟು ಓದಿರಿ

Scroll to Top