ಬಾಹುಬಲಿ ಡೈರೆಕ್ಟರ್ ಜತೆಯಾದ ಪ್ರಿನ್ಸ್ ಮಹೇಶ್!

Picture of Cinibuzz

Cinibuzz

Bureau Report

ಮಹರ್ಷಿ ಸಿನಿಮಾ ಮುಗಿಸಿ ಬಿಡುಗಡೆಯ ಖುಷಿಯಲ್ಲಿರುವ ತೆಲುಗು ನಟ ಪ್ರಿನ್ಸ್ ಮಹೇಶ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ ಎಸ್.ಎಸ್. ರಾಜಮೌಳಿ ಜತೆಗೆ ಮುಂಬರುವ ವರ್ಷದಲ್ಲಿ ಹೊಸ ಚಿತ್ರದಲ್ಲಿ ಅಭಿನಯಿಸುವಾಗಿ ಮಹೇಶ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇಬ್ಬರೂ ಜತೆಯಾಗಿ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿದ್ದೇವೆ. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ಕೂಡಾ ಫೈನಲ್ ಆಗಿದೆ. ಹಿರಿಯ ನಿರ್ಮಾಪಕ ಕೆ.ಎಲ್.ನಾರಾಯಣ ಸಿನಿಮಾ ನಿರ್ಮಿಸುತ್ತಿದ್ದಾರೆ. ರಾಜ ಮೌಳಿ ಮತ್ತು ನಾನು ಸದ್ಯಕ್ಕೆ ಒಪ್ಪಿಕೊಂಡಿರುವ ಪ್ರಾಜೆಕ್ಟ್ ಗಳನ್ನು ಮುಗಿಸಿದ ನಂತರವೇ ಮುಂದಿನ ವರ್ಷ ಜತೆಯಾಗಿ ಕೆಲಸ ಮಾಡಲಿದ್ದೇವೆ ಎಂದು ಪ್ರಿನ್ಸ್ ವಿವರಿಸಿದ್ದಾರೆ.

ವಂಶಿ ಪೈಡಿಪಲ್ಲೇ ನಿರ್ದೇಶನದ ಮಹರ್ಷಿ ಮೇ 9ರಂದು ಇಂದು ತೆರೆಕಾಣಲಿದ್ದು, ನಿರ್ದೇಶಕರಾದ ತ್ರಿವಿಕ್ರಮ್ ಶ್ರೀನಿವಾಸ್, ಸುಕುಮಾರ್ ಜೊತೆ ಸಿನಿಮಾಕ್ಕೆ ಒಪ್ಪಿಗೆ ನೀಡಿರುವ ಮಹೇಶ್, ನಂತರ ಅನಿಲ್ ರವಿಪುಡಿ ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಜುಲೈನಲ್ಲಿ ಆರಂಭವಾಗಲಿದೆ.

ಮಹೇಶ್ ಗೆ ಕನ್ನಡತಿ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಸಿನಿಮಾದಲ್ಲಿ ಜಗಪತಿ ಬಾಬು, ಅಲ್ಲರಿ ನರೇಶ್ ಕೂಡಾ ಇದ್ದಾರೆ.

ಇನ್ನಷ್ಟು ಓದಿರಿ

Scroll to Top