ದುಬಾರಿಯಾದ ಮಹರ್ಷಿ!

Picture of Cinibuzz

Cinibuzz

Bureau Report

ನಟ ಮಹೇಶ್ ಬಾಬು ನಟಿಸಿರುವ ಬಹು ನಿರೀಕ್ಷೆಯ 25ನೇ ಸಿನಿಮಾ ಮಹರ್ಷಿ. ಸದ್ಯ ಬಾರಿ ನಿರೀಕ್ಷೆಯ ಜತೆಗೆ ಮಹೇಶ್ ಬಾಬು ಕಮ್ ಬ್ಯಾಕ್ ಆಗುವಲ್ಲಿಯೂ ಈ ಸಿನಿಮಾ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಸಿನಿಮಾ ಬಿಡುಗಡೆಗೆ ಪ್ರಿನ್ಸ್ ಅಭಿಮಾನಿಗಳು ಒತ್ತಾಸೆಯಿಂದ ಕಾಯುತ್ತಿದ್ದರು. ಸದ್ಯ ಸಿನಿಮಾ ಇಂದು ಎಲ್ಲೆಡೆ ಬಿಡುಗಡೆಯಾಗಿದೆ.

ಸದ್ಯ ಸಿನಿಮಾ ಬಿಡುಗಡೆಗೂ ಮುನ್ನ ಈಗಾಗಲೇ ಮುಂಗಡ ಟಿಕೆಟ್ ಬುಕ್ ಆಗಿವೆ. ಹೊಸ ಸುದ್ದಿ ಏನಪ್ಪಾ ಅಂದ್ರೆ ಈ ಸಿನಿಮಾ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು, ಒಪ್ಪಿಗೆ ಪಡೆದೇ ಈ ದರ ಏರಿಕೆ ಮಾಡಲಾಗಿದೆಯಂತೆ. ಹೈದರಾಬಾದ್ ಸಿಂಗಲ್ ಸ್ಕ್ರೀನ್ ಥಿಯೇಟರ್ ನಲ್ಲಿರುವ ದರ ೮೦ ರೂಪಾಯಿದ್ದು ಅದನ್ನು ೧೧೦ ರೂಪಾಯಿಗೆ ಏರಿಸಲಾಗಿದೆ. ಇನ್ನು ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್ ಬೆಲೆಗಿಂತ ೫೦ ರೂಪಾಯಿ ಹಾಗೂ ಪ್ರಸಾದ್ ಐಮ್ಯಾಕ್ಸ್‌ನಲ್ಲಿ ೧೩೮ ರೂಪಾಯಿ ಇರುವ ದರವನ್ನು ೨೦೦ ರೂಪಾಯಿಗೆ ಹೆಚ್ಚಿಸಿದ್ದಾರೆ. ಇನ್ನು ಈ ದರ ಸಿನಿಮಾ ಬಿಡುಗಡೆಯಾಗಿ ಎರಡು ವಾರದವರೆಗೂ ಮುಂದುವರೆಯಲಿದೆ ಎನ್ನಲಾಗಿದೆ. ಸದ್ಯ ಮಹರ್ಷಿ ಸಿನಿಮಾ ವಂಶಿ ಪೈಡಿಪಲ್ಲಿ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ವೈಜಯಂತಿ ಮೂವೀಸ್, ಶ್ರೀವೆಂಕಟೇಶ್ವರ ಕ್ರಿಯೇಷನ್ಸ್, ಪಿವಿಪಿ ಸಿನಿಮಾ ಜೊತೆ ಸೇರಿ ನಿರ್ಮಿಸಿದ್ದಾರೆ. ಇನ್ನು ಚಿತ್ರದಲ್ಲಿ ಮಹೇಶ್ ಬಾಬು ಅವರಿಗೆ ನಾಯಕಿಯಾಗಿ ಪೂಜಾ ಹೆಗಡೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇನ್ನುಳಿದಂತೆ ಅಲ್ಲರಿ ನರೇಶ್, ಜಗಪತಿ ಬಾಬು, ಜಯಸುಧಾ, ಸಾಯಿಕುಮಾರ್, ಪವಿತ್ರಾ ಲೋಕೇಶ್, ಪ್ರಕಾಶ್ ರಾಜ್, ಸೋನಾಲ್ ಚೌಹಾನ್, ನರೇಶ್, ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top