ಮುಂದಿನ ತಿಂಗಳು ಉಪೇಂದ್ರ ಐ ಲವ್ ಯು ರಿಲೀಸ್!

Picture of Cinibuzz

Cinibuzz

Bureau Report

ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸಿರುವ ಬಹು ನಿರೀಕ್ಷಿತ ಐ ಲವ್ ಯು ಸಿನಿಮಾ ರಿಲೀಸ್ ದಿನಾಂಕ ಕಡೆಗೂ ಫಿಕ್ಸ್ ಆಗಿದೆ. ಮುಂದಿನ ತಿಂಗಳ ಜೂನ್ 14ಕ್ಕೆ ಐ ಲವ್ ಯು ಸಿನಿಮಾ ಥಿಯೇಟರ್ ಗೆ ದಾಳಿ ಇಡಲಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ ಕಳೆದ ವರ್ಷದ ಅಂತ್ಯದಲ್ಲೇ ಐ ಲವ್ ಯು ಸಿನಿಮಾ ರಿಲೀಸ್ ಆಗಬೇಕಿತ್ತು. ನಂತರ ವ್ಯಾಲೆಂಟೆನ್ಸ್ ಡೇ ಗೆ ಸಿನಿಮಾ ರಿಲೀಸ್ ಆಗಬಹುದೆಂದು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಉಪೇಂದ್ರ ಸಂಸ್ಥಾಪನೆಯ ಪ್ರಜಾಕೀಯ ಪಕ್ಷದ ಬಿರುಸಿನ ಕಾರ್ಯಚಟುವಟಿಕೆಗಳಿಗೆ ಸಿನಿಮಾವನ್ನು ಮುಂದೂಡಲಾಗಿತ್ತು.

ಇತ್ತೀಚೆಗಷ್ಟೇ ಸೆನ್ಸಾರ್ ಮುಗಿಸಿಕೊಂಡಿರುವ ಐ ಲವ್ ಯು ಚಿತ್ರಕ್ಕೆ ಯು ಎ ಪ್ರಮಾಣ ಪತ್ರವೂ ಲಭಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ಪ್ರೊಮೋಷನ್ ಕೆಲಸಗಳೂ ಕೂಡ ಶುರುವಾಗಲಿದೆ. ಚಿತ್ರದಲ್ಲಿ ಉಪೇಂದ್ರ ಲವರ್ ಬಾಯ್ ಗೆಟಪ್ ನಲ್ಲಿ ಕಾಣಿಸಿಕೊಂಡ್ರೆ, ಡಿಂಪಲ್ ಕ್ವೀನ್ ಚಳಿ ಬಿಟ್ಟು ನಟಿಸಿದ್ದಾರೆ. ಈಗಾಗಲೇ ಟ್ರೇಲರ್ ಬಹಳಷ್ಟು ಸದ್ದು ಮಾಡುತ್ತಿದ್ದು, ಲವ್ ಗುರುಗಳಾದ ಉಪೇಂದ್ರ ಮತ್ತು ಚಂದ್ರು ಕಾಂಬಿನೇಷನ್ನಿನ ಸಿನಿಮಾ ಅಭಿಮಾನಿಗಳಲ್ಲಿ ಬಹಳಷ್ಟು ಕೌತುಕತೆಯನ್ನು ಹುಟ್ಟುಹಾಕಿದೆ. ಇನ್ನು ಐ ಲವ್ ಯು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕ ಕಾಲದಲ್ಲಿ ತೆರೆ ಕಾಣಲಿದೆ.

ಇನ್ನಷ್ಟು ಓದಿರಿ

Scroll to Top