ಮತ್ತೊಂದು ವಿವಾದದಲ್ಲಿ ರಾಖಿ ಸಾವಂತ್!

Picture of Cinibuzz

Cinibuzz

Bureau Report

ಬಾಲಿವುಡ್ಡಿನ ಹಾಟ್ ಬ್ಯೂಟಿ ಎಂದೇ ಗುರುತಿಸಿಕೊಂಡಿರುವ ವಿವಾದಾತ್ಮಕ ನಟಿ ರಾಖಿ ಸಾವಂತ್ ಮತ್ತೆ ವಿವಾದದಲ್ಲಿದ್ದಾರೆ. ತಮ್ಮ ಮುಂಬರುವ ಸಿನಿಮಾದಲ್ಲಿ ಫುಲ್ ಬ್ಯುಸಿಯಾಗಿರುವ ರಾಖಿ ಅದೇ ಚಿತ್ರದಲ್ಲಿನ ಸೀನ್ ವೊಂದರ ಫೋಟೋವನ್ನು ತಮ್ಮ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಮೈ ಮೇಲೆ ಪಾಕಿಸ್ತಾನದ ಬಾವುಟವನ್ನು ಹೊದ್ದು ನಿಂತಿದ್ದು, ನಾನು ನನ್ನ ಭಾರತ ದೇಶವನ್ನು ಪ್ರೀತಿಸುತ್ತೇನೆ. ಇದು ಸಿನಿಮಾ ಧಾರಾ 370 ಯಲ್ಲಿಯ ಪಾತ್ರವೆಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ಸದ್ಯ ಪೋಸ್ಟ್ಸಾಮಾಜಿಕ ಜಾಲತಾಣಗಳಲ್ಲಿ ಸಖತ್ವೈರಲ್ಆಗಿದ್ದು, ಜನರು ರಾಖಿ ವಿರುದ್ಧ ಮುಗಿಬಿದ್ದಿದ್ದಾರೆ. ಕೆಲವರು ನೀವು ಪಾಕಿಸ್ತಾನಿ ನಾಗರಿಕತ್ವಕ್ಕೆ ಸೂಟ್ಆಗ್ತೀರಾ ಅಂತ ಕಾಲೆಳೆದಿದ್ರೆ, ಇನ್ನು ಕೆಲವರು ಮಿಸ್ರಾಖಿ ಪಾಕಿಸ್ತಾನಿ ಸಾವಂತ್ಅಂತ ಗೇಲಿ ಮಾಡಿದ್ದಾರೆ. ಸೋಷಿಯಲ್ಮೀಡಿಯಾಗಳಲ್ಲಿ ಫೋಟೋ ಇಷ್ಟೆಲ್ಲ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಎಚ್ಚೆತ್ತ ರಾಖಿ ಸಾವಂತ್, ವಿಡಿಯೋ ಮೂಲಕ ಇದಕ್ಕೆಲ್ಲ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ‘‘ಧಾರಾ 370’ ಸಿನಿಮಾದಲ್ಲಿ ಪಾಕಿಸ್ತಾನಿ ಹುಡುಗಿಯಾಗಿ ನಟಿಸುತ್ತಿದ್ದೇನೆ. ಇದಕ್ಕೆಲ್ಲ ಕಥೆ ಕಟ್ಟಬೇಡಿ ಎಂದು ವಿನಂತಿಸಿಕೊಂಡಿದ್ದಾರೆ. ಅಲ್ಲದೇ, ಎಲ್ಲ ಪಾಕಿಸ್ತಾನ ಪ್ರಜೆಗಳು ಕೆಟ್ಟವರಲ್ಲ. ಕೆಲ ಜನರು ಕೆಟ್ಟ ಹಾದಿ ಹಿಡಿದಿರುತ್ತಾರೆ. ಹಾಗಂತ ಎಲ್ಲರನ್ನ ಕೆಟ್ಟವರು ಅಂತ ಅನ್ನೋಕಾಗುತ್ತಾ ಅಂತ ಪ್ರಶ್ನಿಸಿದ್ದಾರೆ. ಜೊತೆಗೆ ಪಾಕಿಸ್ತಾನದ ಜನತೆಯನ್ನ ನಾನು ಗೌರವಿಸುತ್ತೇನೆ ಅಂತ ಶೂಟಿಂಗ್ಸ್ಪಾಟ್ನಿಂದಲೇ ವಿಡಿಯೋ ಶೇರ್ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top