99 ಸಿನಿಮಾದ ವಿಡಿಯೋ ಸಾಂಗ್ ರಿಲೀಸ್!

Picture of Cinibuzz

Cinibuzz

Bureau Report

ಶಾಲೆಯ ದಿನಗಳಲ್ಲಿ ಹುಟ್ಟಿದ್ದ ಲವ್ವನ್ನು ದೊಡ್ಡವರಾದ ಮೇಲೆ ಹಂಚಿಕೊಳ್ಳುವಾಗ ಇರೋ ಮಜವೇ ಬೇರೆ. ಅಕಸ್ಮಾತ್ ಹಂಚಿಕೊಳ್ಳುವ ಸಂದರ್ಭದಲ್ಲಿ ಆ ಹುಡುಗಿಗೇನಾದರೂ ಕಂಕಣ ಭಾಗ್ಯ ಕೂಡಿ ಬಂದು, ಮದುವೆ ಆಗದೇ ಉಳಿದಿದ್ದರೆ ಅವಳನ್ನೇ ಮದುವೆಯೂ ಆಗಬಹುದಲ್ಲವೇ. ಎಷ್ಟೋ ವರ್ಷಗಳ ನಂತರ ಮತ್ತೆ ಪ್ರೇಮಿಗಳು ಎದುರಾದಾಗ ಬದಲಾಗುವ ಕ್ಷಣಗಳನ್ನು 99 ಸಿನಿಮಾದಲ್ಲಿ ತೀರ ಎಮೋಷನಲ್ ಆಗಿ ತೋರಿಸಿರೋದು ಚಿತ್ರದ ಪ್ಲಸ್ ಪಾಯಿಂಟ್. ಈ ಸಿನಿಮಾದಲ್ಲಿ ಗಣೇಶ್ದೇವದಾಸ್ರಂತೆ ಗಡ್ಡ ಬಿಟ್ಟು ಭಗ್ನ ಪ್ರೇಮಿಯಾಗಿ ಕಾಣಿಸಿಕೊಂಡರೆ, ಭಾವನಾ ಅವರ ಪ್ರೇಯಸಿಯಾಗಿ ಅಭಿನಯಿಸಿದ್ದಾರೆ.

ಸದ್ಯ ಈ ಸಿನಿಮಾದ ವಿಡಿಯೋ ಸಾಂಗೊಂದು ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗಿದೆ. ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ಶ್ರೇಯಾ ಘೋಷಾಲ್ ಧ್ವನಿಯಲ್ಲಿ ಹಾಡು ಮೂಡಿಬಂದಿದೆ. ಸಾಹಿತ್ಯವನ್ನು ಕವಿರಾಜ್ ಬರೆದಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಸಿನಿಮಾದಲ್ಲಿ ನಾಯಕಿಯಾಗಿ ಭಾವನ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಪ್ರೀತಂ ಗುಬ್ಬಿ ನಿರ್ದೇಶನವಿದೆ. ನಿರ್ಮಾಪಕ ರಾಮು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಂದ್ಹಾಗೆ 99 ಸಿನಿಮಾ ತಮಿಳಿನ ಸೂಪರ್ ಹಿಟ್ 96 ಚಿತ್ರದ ರಿಮೇಕ್ ಆಗಿದೆ. ಸದ್ಯ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಇನ್ನಷ್ಟು ಓದಿರಿ

Scroll to Top