ಮದರ್ಸ್ ಡೇ ಪ್ರಯುಕ್ತ ವಿಜಯರಥ ಲಿರಿಕಲ್ ಸಾಂಗ್ ರಿಲೀಸ್!

Picture of Cinibuzz

Cinibuzz

Bureau Report

ವೃಕ್ಷ ಕ್ರಿಯೇಷನ್ಸ್ ಬ್ಯಾನರ್ಸ್ ಅಡಿಯಲ್ಲಿ, ರಮೇಶ್.ಎಸ್.ಆರ್ ಮಧುಗಿರಿ ವಿಜಯರಥ ಚೊಚ್ಚಲ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರವನ್ನು ಅಜಯ್ ಸೂರ್ಯ ನಿರ್ದೇಶನ ಮಾಡುತ್ತಿದ್ದು, ಹತ್ತು ಹಲವು ಅಚ್ಚರಿ ವಿಚಾರಗಳನ್ನು ಸಿನಿಮಾ ಹೊಂದಿರುವುದು ವಿಶೇಷ.   ಇದುವರೆಗೂ ಕನ್ನಡ-ತೆಲುಗು-ಹಿಂದಿ ಚಿತ್ರಗಳಿಗೆ ಸಹ-ನಿರ್ದೇಶನ ಮಾಡುತ್ತಾ, ಕೆಲವು ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ವಸಂತ್‍ ಕಲ್ಯಾಣ್ ವಿಜಯರಥದ ಮೂಲಕ ನಾಯಕನಾಗಿ ಬಡ್ತಿ ಹೊಂದಿದ್ದಾರೆ. ಇನ್ನು ವಸಂತ್ ಕಲ್ಯಾಣ್ ಗೆ ನಾಯಕಿಯಾಗಿ ಕೆಜಿಎಫ್ ಖ್ಯಾತಿಯ ಅರ್ಚನಾ ಜತೆಯಾಗಿದ್ದಾರೆ. ಇನ್ನು ಅರ್ಪಿತಾಗೌಡ ರವರು ಮತ್ತೋರ್ವ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ರಾಜೇಶ್ ನಟರಂಗ, ಹನುಮಂತೇಗೌಡ ನಿಹಾರಿಕಾ ಸೇರಿದಂತೆ ಅನುಭವಿ ಕಲಾವಿದರ ದಂಡೆ ಚಿತ್ರದಲ್ಲಿದೆ.

ಈಗಾಗಲೇ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಚಿತ್ರವು ಜೈಆಂಜನೇಯ……….. ಎಂಬ ಕೈಲಾಷ್‍ ಖೇರ್ ಹಾಡಿರುವ ಹಾಡನ್ನು ಮತ್ತು ಟಾಪ್ ಮೇಲೆ ಕುಂತಗಾಡು……. ಎಂಬ ವಿಜಯ್ ಪ್ರಕಾಶ್‍ರವರು ಹಾಡನ್ನು ಲಿರಿಕಲ್ ವೀಡಿಯೋವನ್ನು ಆನಂದ್‍ ಆಡಿಯೋ ಮೂಲಕ ಬಿಡುಗಡೆ ಮಾಡಿದ್ದು ಹಾಡುಗಳು ವೈರಲ್ ಕೂಡ ಆಗಿತ್ತು. ಸದ್ಯ ಮದರ್ಸ್ ಡೇ ಪ್ರಯುಕ್ತ ವಿಜಯರಥ ಚಿತ್ರ ತಂಡ ಅಮ್ಮಾ………ಅಮ್ಮ…….. ಎಂಬ ಲಿರಿಕಲ್‍ ವೀಡಿಯೋವನ್ನು ಬಿಡುಗಡೆ ಮಾಡಿದ್ದು, ಹಾಡಿಗೆ ಎಸ್.ಪ್ರೇಮ್‍ ಕುಮಾರ್‍ರವರ ಸಂಗೀತಕ್ಕೆ ಚಂದ್ರು.ಎಸ್.ಎಲ್‍ ರವರ ಸಾಹಿತ್ಯವಿದೆ. ವಿಜಯ ಪ್ರಕಾಶ್‍ರವರು ಈ ಹಾಡನ್ನು ಹಾಡಿದ್ದಾರೆ. “ಕಂದನ ಮೊದಲ ತೊದಲೆ ಅಮ್ಮಾನೆ…….. ಎಂಬ ಪ್ರಾರಂಭಿಕ ಸಾಲಿನೊಂದಿಗೆ ಶುರುವಾಗುವ ಸಾಹಿತ್ಯವು ಹೃದಯ ತಟ್ಟುವಂತಿದ್ದು, ತಾಯಿಯೇ ದೇವರಿಗೂ ದೇವರು ಎಂದು ಸಾರುವಂತಹ ಭಿನ್ನ ಸಾಹಿತ್ಯದಿಂದ ಕೂಡಿದೆ. ಈಗಾಗಲೇ ಬಿಡುಗಡೆಗೊಂಡ ಎರಡು ಹಾಡುಗಳಿಗೆ ಸಿಕ್ಕಂತ ಬೆಂಬಲ ಅಮ್ಮ ಹಾಡಿಗೆ ದುಪ್ಪಟ್ಟಾಗಬಹುದೆಂಬ ನಂಬಿಕೆ ಚಿತ್ರತಂಡದ್ದು.

ಇನ್ನಷ್ಟು ಓದಿರಿ

Scroll to Top