ಕಮಲದ ಕೈ ಹಿಡಿಯಲಿರುವ ಕೀರ್ತಿ ಸುರೇಶ್!

Picture of Cinibuzz

Cinibuzz

Bureau Report

ಮಹಾನಟಿ ಕೀರ್ತಿ ಸುರೇಶ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತಮ್ಮ ಅಮೋಘ ನಟನೆಯ ಮೂಲಕವೇ ಬಾರಿ ಸದ್ದು ಮಾಡುತ್ತಿರುವ ಕೀರ್ತಿ ಸುರೇಶ್, ಬಹು ಭಾಷಾ ನಟಿಯಾಗಿ ಹೆಸರುವಾಸಿಯಾಗಿದ್ದಾರೆ. ಇತ್ತೀಚಿಗೆ ಬಿಡುಗಡೆ ಕಂಡ ಮಹಾನಟಿ ಸ್ಪಷ್ಟ ಉದಾಹರಣೆ. ನಟನೆಯ ಹೊರತಾಗಿಯೂ ಸುದ್ದಿಯಾಗಿರುವ ಕೀರ್ತಿಸುರೇಶ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ.

ಈಗಾಗಲೇ ಈ ಕುರಿತು ಮಾತುಕತೆ ಕೂಡ ನಡೆದಿದೆಯೆನ್ನುವ ವದಂತಿಗಳಿಗೆ ಬರವಿಲ್ಲ. ಆದರೆ ಈ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಸದ್ಯ ದಿಲ್ಲಿಯಲ್ಲಿ ತಮ್ಮ ತಂದೆಯ ಪರ ಪ್ರಚಾರದಲ್ಲಿರುವ ಕೀರ್ತಿ ಸುರೇಶ್ ಈ ಕುರಿತು ಸ್ಪಷ್ಟನೆ ನೀಡಬೇಕಿದೆ.ಕೀರ್ತಿ ಸುರೇಶ್ ತಂದೆ ಈಗಾಗಲೇ ಬಿಜೆಪಿಯಲ್ಲಿರುವುದೇ ಕೀರ್ತಿಯೂ ಬಿಜೆಪಿ ಸೇರಲಿದ್ದಾರೆಂಬುದಕ್ಕೆ ಪ್ರಮುಖ ಕಾರಣವಾಗಿದೆ.

ಇನ್ನಷ್ಟು ಓದಿರಿ

Scroll to Top