ಗಂಡುಗಲಿ ಮದಕರಿ ನಾಯಕನಿಗೆ ಭರದ ಸಿದ್ದತೆ!

Picture of Cinibuzz

Cinibuzz

Bureau Report

ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜತೆಗೆ ಇನ್ನು ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳೂ ಸಹ ದರ್ಶನ್ ಬತ್ತಳಿಕೆಯಲ್ಲಿದೆ. ಈ ನಡುವೆ ದರ್ಶನ್ ಗಾಗಿ ಐತಿಹಾಸಿಕ ಕಥೆಯಾಧಾರಿತ ಸಿನಿಮಾ ಗಂಡುಗಲಿ ಮದಕರಿ ನಾಯಕ ಚಿತ್ರದ ಚಿತ್ರೀಕರಣದ ಪ್ರಾರಂಭಕ್ಕೂ ಮುಹೂರ್ತ ಫಿಕ್ಸ್ ಆಗಲಿದೆ. ಈಗಾಗಲೇ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೋಟೆನಾಡಿನಲ್ಲಿ ಸಿನಿಮಾ ಪ್ರವಾಸದಲ್ಲಿದ್ದಾರೆ.

ಬಿ.ಎಲ್. ವೇಣು ಕಾದಂಬರಿಯಾಧರಿತ ಚಿತ್ರ ಇದಾಗಿದ್ದು ಕಥೆಗೆ ತಕ್ಕಂತೆ ಚಿತ್ರದುರ್ಗದ ಹಳ್ಳಿಯೊಂದರಲ್ಲಿ ಅದ್ಧೂರಿ ಸೆಟ್ ಹಾಕಲು ಚಿಂತನೆ ನಡೆದಿದೆ. ಈಗಾಗಲೇ ದರ್ಶನ್​ಗೆ ಮೇಕಪ್ ಟೆಸ್ಟ್​ ಕೂಡ ನಡೆದಿದ್ದು ಮದಕರಿ ನಾಯಕನ ಪಾತ್ರದಲ್ಲಿ ಮಿಂಚಲು ದಚ್ಚು ದೇಹವನ್ನು ಹುರಿಗೊಳಿಸುತ್ತಿದ್ದಾರೆ. ಅದಕ್ಕಾಗಿ ಉದ್ದದ ಗಡ್ಡ, ಕೂದಲು ಬಿಟ್ಟು ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯ ಮದಕರಿ ನಾಯಕ ಚಿತ್ರದ ಸ್ಕ್ರಿಪ್ಟಿಂಗ್ ಕೆಲಸವೂ ಸದ್ದಿಲ್ಲದೇ ನಡೆಯುತ್ತಿದೆ. ಸಂಗೊಳ್ಳಿ ರಾಯಣ್ಣನಂತಹ ಬ್ಲಾಕ್ ಬಸ್ಟರ್ ಸಿನಿಮಾದ ಬಳಿಕ ದರ್ಶನ್ ನಟಿಸುತ್ತಿರುವ ಮತ್ತೊಂದು ಐತಿಹಾಸಿಕ ಸಿನಿಮಾ ಇದಾಗಿದೆ.  ಚಿತ್ರಕ್ಕೆ ಹಂಸಲೇಖ ಸಂಗೀತವಿದೆ. ಸಿನಿಮಾದ ಕುರಿತಾಗಿ ಅಧಿಕೃತ ಮಾಹಿತಿ ಸದ್ಯದಲ್ಲಿಯೇ ಹೊರಬೀಳಲಿದೆ.

ಇನ್ನಷ್ಟು ಓದಿರಿ

Scroll to Top