ಪವರ್ ಸ್ಟಾರ್ ಜತೆಯಾದ ಸತ್ಯಪ್ರಕಾಶ್!

Picture of Cinibuzz

Cinibuzz

Bureau Report

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಿ ಆರ್ ಕೆ ಬ್ಯಾನರ್ ನಲ್ಲಿ ಕವಲುದಾರಿ ಸಿನಿಮಾ ತೆರೆಕಂಡು ಯಶಸ್ಸು ಗಳಿಸಿತ್ತು. ಇದೀಗ ಪುನೀತ್ ರಾಜ್ ಕುಮಾರ್ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ನಿರ್ದೇಶಕ ಸತ್ಯಪ್ರಕಾಶ್ ಅವರ ಜತೆಗೆ ಹೊಸ ಸಿನಿಮಾ ಮಾಡುವುದಾಗಿಯೂ ಘೋಷಿಸಿದ್ದಾರೆ. ಈ ಹಿಂದೆ ರಾಮಾ ರಾಮಾ ರೇ, ಒಂದಲ್ಲಾ ಎರಡಲ್ಲಾ ಸೇರಿಂದತೆ ಹಲವು ಸೃಜನಾತ್ಮಕ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಸತ್ಯಪ್ರಕಾಶ್ ಮತ್ತೊಂದು ಸದಬಿರುಚಿಯ ಸಿನಿಮಾವನ್ನು ಮಾಡುವುದಾಗಿಯೂ ಪ್ಲ್ಯಾನ್ ರೂಪಿಸಿದ್ದಾರೆ. ಈಗಾಗಲೇ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು, ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಪುನೀತ್ ನಿರ್ಮಾಣದಲ್ಲಿ ಪ್ರಜ್ವಲ್ ದೇವರಾಜ್ ಪತ್ನಿ ನಟನೆಯ ‘ಲಾ’ ಸಿನಿಮಾ ಹಾಗೂ ಮಾಯಾ ಬಜಾರ್ ಸೇರಿದಂತೆ ಹಲವು ಸಿನಿಮಾಗಳು ತೆರೆ ಕಾಣಬೇಕಿದೆ. ಒಟ್ಟಾರೆಯಾಗಿ ನಟನೆಯ ಜತೆಗೆ ಪುನೀತ್ ರಾಜ್ ಕುಮಾರ್ ತಮ್ಮ ಬ್ಯಾನರ್ ಮುಖಾಂತರ ಹೊಸ ಹೊಸ ಮುಖಗಳನ್ನು ಲಾಂಚ್ ಮಾಡುತ್ತಿರುವುದು ಅಭಿಮಾನಿಗಳಿಗೆ ಡಬಲ್ ಧಮಾಕವನ್ನು ನೀಡುತ್ತಿದೆ.

ಇನ್ನಷ್ಟು ಓದಿರಿ

Scroll to Top