ಕೇರಳ ಆರೋಗ್ಯ ಮಂತ್ರಿಯ ಪಾತ್ರ ವೈರಸ್ ಚಿತ್ರದಲ್ಲಿದೆಯಂತೆ!

Picture of Cinibuzz

Cinibuzz

Bureau Report

ಕಳೆದ ವರ್ಷ ಕೇರಳ ಎರಡು ವಿಚಾರಕ್ಕೆ ತತ್ತಿರಿಸಿತ್ತು. ಒಂದು ಕೇರಳ ಜಲ ಪ್ರವಾಹ. ಮತ್ತೊಂದು ನಿಫಾ ವೈರಸ್. ಆ ಎರಡರಿಂದ ಸಂಕಷ್ಟಕ್ಕೀಡಾಗಿದ್ದ ದೇವರ ನಾಡಿನ ಮಂದಿ ಓಣಂ ಅನ್ನು ಖುಷಿಯಿಂದ ಆಚರಿಸದ ಮಟ್ಟಿಗೆ ತೀರ ಬೆಂದು ಸಾಯುವಂತೆ ಮಾಡಿಬಿಟ್ಟಿತ್ತು. ಇನ್ನು ಕಳೆದ ವರ್ಷ ಕಾಡಿದ ನಿಫಾ ವೈರಸ್ ನ ಕುರಿತಾಗಿ ವೈರಸ್ ಎನ್ನುವ ಸಿನಿಮಾವೊಂದು ರೆಡಿಯಾಗಿರೋದು, ಅದು ಚಿತ್ರಕತೆ ರೂಪವನ್ನು ಪಡೆದಿರೋದು, ಈಗಾಗಲೇ ಸಿನಿಮಾದ ಟ್ರೇಲರ್ ರಿಲೀಸ್ ಕೂಡ ಆಗಿರೋದು ಸಿನಿ ರಸಿಕರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಸದ್ಯ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳ ಪೈಕಿ ವೈರಸ್ ಕೂಡ ಒಂದಾಗಿರೋದು ಶಾಕಿಂಗ್ ವಿಚಾರ ಕೂಡ. ವೈರಸ್ ಸಿನಿಮಾವನ್ನು ಆಶಿಕ್ ಅಬು ನಿರ್ದೇಶನ ಮಾಡುತ್ತಿದ್ದು, ವೈರಲ್ ಇದೇ ಜೂನ್ ತಿಂಗಳಿಗೆ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ.

ಇನ್ನು ಚಿತ್ರ ತಯಾರಕರು ಇತ್ತೀಚಿಗೆ ಸಿನಿಮಾದ  ಪೋಸ್ಟರ್ ಒಂದನ್ನು ರಿಲೀಸ್ ಮಾಡಿದ್ದಾರೆ. ರೇವತಿ ಪಾತ್ರವಿರುವ ಈ ಪೊಸ್ಟರ್ ಸಾಕಷ್ಟು ಕೌತುಕವನ್ನು ಸೃಷ್ಟಿಸಿದೆ. ಕೇರಳದಲ್ಲಿ ವೈರಸ್ ದಾಳಿ ಇಟ್ಟಾಗ ಅದನ್ನು ಸಮರ್ಥವಾಗಿ ಎದುರಿಸುವ ಹೆಗ್ಗಳಿಕೆಗೆ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಪಾತ್ರರಾಗಿದ್ದರು. ಅವರ ಪಾತ್ರವೇ ವೈರಸ್ ಸಿನಿಮಾದಲ್ಲಿ ರೇವತಿ ಆಗಿರೋದು ವಿಶೇಷ.

 

ಇನ್ನಷ್ಟು ಓದಿರಿ

Scroll to Top