ಕುರುಕ್ಷೇತ್ರ ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್!

Picture of Cinibuzz

Cinibuzz

Bureau Report

ಸಿನಿ ರಸಿಕರು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಕುರುಕ್ಷೇತ್ರ ಸಿನಿಮಾದ ರಿಲೀಸ್ ಗೆ ಕಡೆಗೂ ಕಾಲ ಕೂಡಿ ಬಂದಿದೆ. ರೆಬೆಲ್ ಸ್ಟಾರ್  ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್,  ಚಾಲೆಂಜಿಂಗ್ ಸ್ಟಾರ್ ದರ್ಶನ್, ಯುವರಾಜ  ನಿಖಿಲ್, ಶಶಿಕುಮಾರ್, ಅರ್ಜುನ್ ಸರ್ಜಾ, ಸೋನು ಸೂದ್ ಹೀಗೆ ದಿಗ್ಗಜ ಕಲಾವಿದರೇ ಜತೆಯಾಗಿ ನಟಿಸಿರುವ ಮಹಾ ದೃಶ್ಯಕಾವ್ಯ ‘ಕುರುಕ್ಷೇತ್ರ. ಬಹುದೊಡ್ಡ ತಾರಾಗಣದ ಈ ಸಿನಿಮಾದ ರಿಲೀಸ್ ಡೇಟ್ ಅನ್ನು ಅಧಿಕೃತವಾಗಿ ಚಿತ್ರತಂಡ ಇದೇ ಶನಿವಾರ ಸಂಜೆ 6 ಗಂಟೆಗೆ ಅನೌನ್ಸ್ ಮಾಡಲಿದೆ. ಈ ಬಗ್ಗೆ ಸ್ವತಃ ಚಿತ್ರತಂಡ ಪ್ರಕಟಣೆ ಹೊರಡಿಸಿದೆ. ನಗರದ ಖಾಸಗಿ ಹೋಟೆಲೊಂದರಲ್ಲಿ ನಿರ್ದೇಶಕ ನಾಗಣ್ಣ, ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಜೊತೆಗೂಡಿ ನಿರ್ಮಾಪಕ ಮುನಿರತ್ನ ಅವರು ಅನೌನ್ಸ್ ಮಾಡಲಿದ್ದಾರೆ.

ಅಂದಹಾಗೆ, ‘ಮುನಿರತ್ನ ಕುರುಕ್ಷೇತ್ರ’ ಚಿತ್ರದ ನಿರ್ಮಾಪಕರಾದ ಮುನಿರತ್ನ ಅವರು ಈ ಮೊದಲೇ ಹೇಳಿದಂತೆ, ಆಗಸ್ಟ್ ನ ವರಮಹಾಲಕ್ಷ್ಮಿ ಹಬ್ಬದ ದಿನ ರಿಲೀಸ್ ಆಗುವ ಸಾಧ್ಯತೆ ಹೆಚ್ಚಿದೆ. ಈ ಚಿತ್ರವನ್ನು ಜಗತ್ತಿನಾದ್ಯಂತ 2D ಹಾಗೂ 3Dಯಲ್ಲಿ ಗ್ರ್ಯಾಂಡ್ ರಿಲೀಸ್ ಮಾಡುವುದು ಬಹುತೇಕ ಖಚಿತವಾಗಿದೆ. ಕೆಜಿಎಫ್ ಚಿತ್ರದಂತೆ ಕುರುಕ್ಷೇತ್ರ ಚಿತ್ರ ಸಹ 5 ಭಾಷೆಗಳಲ್ಲಿ ಬರಲಿದೆ. ಈಗಾಗಲೇ ಎಲ್ಲಾ ಭಾಷೆಗಳಲ್ಲಿಯೂ  ಟ್ರೇಲರ್‌ಗಳು ರಿಲೀಸ್ ಆಗಲು ರೆಡಿಯಾಗಿವೆ.

ಅಚ್ಚರಿ ಎಂಬಂತೆ, ನಾಳೆ ನಡೆಯಲಿರುವ ಕುರುಕ್ಷೇತ್ರ ರಿಲೀಸ್ ಅನೌನ್ಸ್‌ಮೆಂಟ್ ಈವೆಂಟ್‌ಗೆ ಕುರುಕ್ಷೇತ್ರ ಚಿತ್ರದ ನಾಯಕ ನಟ ದರ್ಶನ್ ಹಾಗೂ ಅದರಲ್ಲಿ ಅಭಿಮನ್ಯು ಪಾತ್ರಧಾರಿ ನಿಖಲ್ ಇಬ್ಬರೂ ಬರಲಿದ್ದಾರೆಯೇ? ಎಂಬುದಕ್ಕೆ ಸದ್ಯಕ್ಕಂತೂ ಉತ್ತರವಿಲ್ಲ. ನಾಳಿನ ಕಾರ್ಯಕ್ರಮದ ನಂತರವಷ್ಟೇ ಲೋಕಸಭಾ ಚುನಾವಣೆಯ ಹುಸಿ ಮುನಿಸು ಮುಂದುವರೆದಿದೆಯೋ ಇಲ್ವೋ ನೋಡ್ಬೇಕು.

ಇನ್ನಷ್ಟು ಓದಿರಿ

Scroll to Top