ಹೃತಿಕ್ – ಕಂಗನಾ ಶೀತಲ ಸಮರಕ್ಕೊಂದು ಟ್ವಿಸ್ಟ್!

Picture of Cinibuzz

Cinibuzz

Bureau Report

ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ನಟಿ ಕಂಗನಾ ರಣಾವತ್ ನಡುವಿನ ಶೀತಲ ಸಮರ ಸಾಕಷ್ಟು ಮಂದಿಗೆ ಗೊತ್ತಿರುವ ವಿಚಾರವೇ. ಕಳೆದ ವರ್ಷ ಇಬ್ಬರ ಜಗಳ ಬಿ ಟೌನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಇವರ ನಡುವಿನ ಕಿತ್ತಾಟ ಕೆಂಡಕಾರುತ್ತಲೇ ಇದೆ. ಈಗ ಮತ್ತೆ ಆ ಕೆಂಡ ಕಿಡಿಕಾಡುವ ಸಮಯ ಬರುವಂತಿದೆ. ಹೌದು, ಇಬ್ಬರ ಜಗಳ ಇನ್ನೇನು ತಣ್ಣಗಾಗುತ್ತಾ ಬಂದಿದೆ ಎನ್ನುವಷ್ಟರಲ್ಲಿ ಮತ್ತೆ ಕಂಗನಾ ಕಿತ್ತಾಟ ಶುರು ಮಾಡಿಕೊಂಡಿದ್ದಾರೆ. ಹೃತಿಕ್ ರೋಷನ್ ಅಭಿನಯದ ಸೂಪರ್ 30 ಸಿನಿಮಾವೇ ಇವರ ಜಗಳಕ್ಕೆ ಕಾರಣವಾಗಿರೋ ವಿಚಾರ. ಕ್ರಿಶ್ ಅಭಿನಯದ ಸೂಪರ್ 30 ಸಿನಿಮಾ ಜುಲೈ 26ಕ್ಕೆ ರಿಲೀಸ್ ಆಗಲು ರೆಡಿಯಾಗಿತ್ತು. ಆದರೆ ಅದೇ ದಿನಾಂಕದಂದೇ ಕಂಗನಾ ಅಭಿನಯದ ಮೆಂಟಲ್ ಹೈ ಕ್ಯಾ ಸಿನಿಮಾ ಕೂಡ ರಿಲೀಸ್ ಆಗಲಿರುವುದು ಇವರಿಬ್ಬರ ನಡುವೆ ಪುನಃ ಬೆಂಕಿ ಹೊತ್ತಿಕ್ಕೊಳ್ಳಲು ಕಾರಣವಾಗಿತ್ತು. ಅಲ್ಲದೇ ಕಂಗನಾ ಬೇಕಂತಲೇ ಅದೇ ದಿನಾಂಕವನ್ನು ಸೆಲೆಕ್ಟ್ ಮಾಡಿದ್ದಾರೆನ್ನುವ ಗುಸು ಗುಸು ಬಿ ಟೌನ್ ನಲ್ಲಿ ಕೇಳಿಬರುತ್ತಿತ್ತು.

ಇದರಿಂದ ಕಂಗನಾ ಸಹೋದರಿ ರಂಗೋಲಿ ಮತ್ತೆ ಹೃತಿಕ್ ವಿರುದ್ಧ ಗರಂ ಆಗಿದ್ದರು. ಇದೆಲ್ಲ ಹೃತಿಕ್ ಬೇಕು ಅಂತಾನೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದರ ನಡುವೆ ‘ಮೆಂಟಲ್ ಹೈ ಕ್ಯಾ’ ಚಿತ್ರದ ನಿರ್ಮಾಪಕಿ ಈ ಸಿನಿಮಾ ರಿಲೀಸ್ ಡೇಟನ್ನು ಫಿಕ್ಸ್ ಮಾಡಿದ್ದು ನಾನೆ. ಯಾರ ಹಸ್ತಕ್ಷೇಪವು ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಎಲ್ಲ ವಿದ್ಯಮಾನ ಘಟಿಸಿದ ಬಳಿಕ ಹೃತಿಕ್ ಸೂಪರ್ 30 ಸಿನಿಮಾ ಡೇಟನ್ನು ಬದಲಿಸಿದ್ದಾರೆನ್ನುವ ಸುದ್ದಿ ಕೇಳಿಬರುತ್ತಿದೆ. ಜುಲೈ 26ಕ್ಕೆ ರಿಲೀಸ್ ಆಗಬೇಕಿದ್ದ ಚಿತ್ರವನ್ನು ಎರಡು ಮುಂಚಿತವಾಗಿಯೇ ರಿಲೀಸ್ ಮಾಡಲಾಗುತ್ತಿದೆಯಂತೆ. ಇದರಿಂದ ಮತ್ತೆ ಗುಸು ಗುಸು ಕೇಳಿಬರುತ್ತಿದ್ದು, ಹೃತಿಕ್ ಕಂಗನಾ ಮೇಲಿದ್ದ ದಿಗಿಲಿಗೆ ಸಿನಿಮಾ ರಿಲೀಸ್ ದಿನಾಂಕ ಬದಲಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ‘ಸೂಪರ್ 30’ ಸಿನಿಮಾ ಜುಲೈ 12ಕ್ಕೆ ತೆರೆಗೆ ಬರುವ ಬಗ್ಗೆ ಚಿತ್ರತಂಡ ಇನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲ. ಅನೌನ್ಸ್ ಮಾಡಿದ್ದೇ ಆದಲ್ಲಿ ಬಾಲಿವುಡ್ ನಲ್ಲಿ ನಟಿಯರ ಹಠಕ್ಕೆ ಬೆಲೆ ಇದೆ ಎಂಬುದು ಗ್ಯಾರೆಂಟಿಯಾಗುತ್ತದೆ.

ಇನ್ನಷ್ಟು ಓದಿರಿ

Scroll to Top