ಮತ್ತೆ ಮಣಿರತ್ನಂ ಗರಡಿಗೆ ಐಶ್ವರ್ಯ ರೈ!

Picture of Cinibuzz

Cinibuzz

Bureau Report

ಮಣಿರತ್ನ ಅವರ ತಮಿಳಿನ ಇರುವರ್ ಸಿನಿಮಾ ಮೂಲಕ ಐಶ್ವರ್ಯ ರೈ ಬಣ್ಣದ ಲೋಕವನ್ನು ಪ್ರವೇಶಿಸಿದವರು. ಅದಾದಮೇಲೆ ಐಶ್ವರ್ಯ ರೈ ಎಂದಿಗೂ ಹಿಂತಿರುಗಿ ನೋಡದ ಮಟ್ಟಿಗೆ ನೇಮು, ಫೇಮನ್ನು ಗಳಿಸಿದರು. ಅಲ್ಲದೇ ಬಾಲಿವುಡ್ ಚಿತ್ರರಂಗವನ್ನು ಆಳುವ ಮಟ್ಟಿಗೆ ಖ್ಯಾತಿಯನ್ನು ಗಳಿಸಿಕೊಂಡರು. ಹೊಸ ಸುದ್ದಿ ಏನಪ್ಪಾ ಅಂದ್ರೆ ಐಶ್ವರ್ಯ ರೈ ಪುನಃ ತಮಿಳು ಚಿತ್ರರಂಗಕ್ಕೆ ಹಿಂದಿರುಗುತ್ತಿದ್ದು, ಮಣಿರತ್ನಂ ಅವರ ಮಲ್ಟಿ ಸ್ಟಾರರ್ ಸಿನಿಮಾ ಪೊನ್ನಿಯಿನ್ ಸೆಲ್ವನ್ ನಲ್ಲಿ ಅಭಿನಯಿಸುತ್ತಿದ್ದಾರಂತೆ.

ಈಗಾಗಲೇ ಐಶ್ವರ್ಯ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸಿನಿಮಾದಲ್ಲಿ ನಂದಿನಿ ಎನ್ನುವ ಖಳನಾಯಕಿಯ ಪಾತ್ರದಲ್ಲಿ ನಟಿಸಲಿದ್ದಾರಂತೆ. ಇನ್ನು ಪೊನ್ನಿಯನ್ ಸೆಲ್ವನ್ ಸಿನಿಮಾಕ್ಕೆ ಎ.ಆರ್. ರೆಹಮಾನ್ ನೀಡಿದ್ದಾರೆ. ಇನ್ನು ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಜಯಂ ರವಿ, ಕೀರ್ತಿ ಸುರೇಶ್, ವಿಕ್ರಮ್, ಕಾರ್ತಿ, ಮೋಹನ್ ಬಾಬು, ಅಮಲಾ ಪವಲ್, ಸತ್ಯರಾಜ್ ಮತ್ತು ಐಶ್ವರ್ಯ ರೈ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇನ್ನಷ್ಟು ಓದಿರಿ

Scroll to Top