ಬ್ಲ್ಯಾಂಕ್ ನಲ್ಲಿದ್ದಾರೆ ಬಿಗ್ ಬಾಸ್ ಕೃಷಿ!

Picture of Cinibuzz

Cinibuzz

Bureau Report

ಲೂಸಿಯಾ ಮಾದರಿಯಂತೆ ಕನಸು ಮತ್ತು ಪ್ರಸ್ತುತ ವಾಸ್ತವತೆಯನ್ನೇ ಎಳೆಯಾಗಿಟ್ಟುಕೊಂಡ ಬ್ಲಾಂಕ್ ಸಿನಿಮಾ ಮಗದೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ಹವಾ ಎಬ್ಬಿಸಲು ಬರುತ್ತಿದೆ.

ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ಕೃಷಿ ತಾಪಂಡ ನಟಿಸುತ್ತಿರುವುದು ವಿಶೇಷವಾಗಿದೆ.

ಈ ಸಿನಿಮಾವನ್ನು ಸುಹಾಸ್ ಜೆ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಯೋಗರಾಜ್ ಭಟ್ಟರ ಶಿಷ್ಯ ಪವನ್ ಕುಮಾರ್ ಲುಡಿಸ್ ಡ್ರೀಮಿಂಗ್ ಕುರಿತಾಗಿ ಲೂಸಿಯಾ ಸಿನಿಮಾವನ್ನು ಮಾಡಿ ಯಶಸ್ಸನ್ನು ಗಳಿಸಿದ್ದರು. ಈಗ ಸುಹಾಸ್ ಜೆ ಕೂಡ ಅದೇ ದಾರಿಯಲ್ಲಿದ್ದಾರೆ. ಇನ್ನು ಕೃಷಿ ತಾಪಂಡಗೆ ಜೋಡಿಯಾಗಿ ಪೂರ್ಣ ಚಂದ್ರ ಮೈಸೂರು ಅಭಿನಯಿಸಿದ್ದಾರೆ. ಉಳಿದಂತೆ ಭರತ್, ಪ್ರಶಾಂತ್ ಸಿದ್ಧಿ, ತೀರ್ಥ, ಸುಚೇಂದ್ರ ಪ್ರಸಾದ್ ತಾರಾಗಣದಲ್ಲಿದ್ದಾರೆ. ಎನ್.ಪಿ.ಮಂಜುನಾಥ್ ಚಿತ್ರಕ್ಕೆ ಬಂಡವಾಳ ಹೂಡಿದ್ದು ಚಿತ್ರದ 80 ಭಾಗ ಚಿತ್ರೀಕರಣ ಈಗಾಗಲೇ ಮುಗಿದಿದೆ.

ಇನ್ನಷ್ಟು ಓದಿರಿ

Scroll to Top