ಕೆಲವು ನಿರ್ಮಾಪಕರು ಸಿನಿಮಾ ಆರಂಭಿಸುತ್ತಿದ್ದಂತೇ ಆ ಚಿತ್ರಗಳ ಬಗೆಗೊಂದು ಪಾಸಿಟೀಫ್ ಫೀಲ್ ಶುರುವಾಗಿಬಿಡುತ್ತದೆ. ಅದಕ್ಕೆ ಅವರ ಹಿಂದಿನ ಸಿನಿಮಾಗಳೂ ಕಾರಣವಿರಬಹುದು. ನಿರ್ಮಾಪಕ ಉದಯ್ ಕೆ. ಮೆಹ್ತಾ ಕೂಡಾ ಗಾಂಧಿನಗರದ ಮಟ್ಟಿಗೆ ಲಕ್ಕಿ ಪ್ರೊಡ್ಯೂಸರ್ ಅಂತಲೇ ಹೆಸರಾಗಿರುವವರು. ಕೃಷ್ಣನ್ ಲವ್ ಸ್ಟೋರಿ, ಜರಾಸಂದ, ಬಚ್ಚನ್, ಕೃಷ್ಣ ರುಕ್ಕು, ಲವ್ ಇನ್ ಮಂಡ್ಯ ದಂಥಾ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿದವರು ಇದೇ ಉದಯ್ ಮೆಹ್ತಾ. ಶರಣ್ ನಟನೆಯಲ್ಲಿ ತೆರೆಗೆ ಬಂದಿದ್ದ ರಾಜ ರಾಜೇಂದ್ರ, ಈಗ ತೆರೆಗೆ ಬರಲು ಸಿದ್ಧವಾಗುತ್ತಿರುವ ಬ್ರಹ್ಮಚಾರಿ ಮತ್ತು ಸಿಂಗ ಸಿನಿಮಾಗಳನ್ನು ಕೂಡಾ ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ.
ಚಿರಂಜೀವಿ ಸರ್ಜಾ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಸಿಂಗ ಸಿನಿಮಾ ಅವರ ವೃತ್ತಿ ಬದುಕಿಗೆ ಮಹಾ ತಿರುವನ್ನು ಕೊಡಲಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಗಾಂಧಿನಗರದಲ್ಲಿ ಹರಿದಾಡುತಿರುವ ಮಾತುಗಳ ಪ್ರಕಾರ ಸಿಂಗ ರಿಲೀಸಾದ ಮೇಲೆ ದೊಡ್ಡ ಮಟ್ಟದ ದಾಖಲೆ ಬರೆಯೋದು ಗ್ಯಾರೆಂಟಿ ಎಂಬ ವಾತಾವರಣವಿದೆ. ಭರ್ಜರಿ ಚೇತನ್ ಕುಮಾರ್ ಬರೆದಿರುವ ಶ್ಯಾನೆ ಟಾಪಾಗೌಳೆ ನಮ್ ಹುಡುಗಿ ಅನ್ನೋ ಹಾಡು ಇವತ್ತು ಎಲ್ಲರ ನಾಲಿಗೆ ಮೇಲೆ ನಾಟ್ಯವಾಡುತ್ತಿದೆ. ಇದೊಂದು ಹಾಡಿಗಾಗಿಯೇ ಜನ ಸಿಂಗನನ್ನು ನೋಡಲು ಥಿಯೇಟರಿಗೆ ನುಗ್ಗಲು ಕಾತರಿಸುತ್ತಿದ್ದಾರೆ. ಇದರ ಜೊತೆಗೆ ಭರ್ಜರಿಯಾದ ಆ್ಯಕ್ಷನ್ ಮತ್ತು ಎಲ್ಲರನ್ನೂ ಸೆಳೆಯುವ ಸೆಂಟಿಮೆಂಟ್ ಕಥಾ ಹಂದರ ನೋಡುಗರನ್ನು ಮೆಚ್ಚಿಸೋದು ನಿಜ.
ಸಿಂಗ ಈಗ ಇಷ್ಟೊಂದು ಟಾಕ್ ಕ್ರಿಯೇಟ್ ಮಾಡಿದೆ ಅಂದರೆ, ಅದಕ್ಕೆ ಚಿತ್ರದ ನಿರ್ಮಾಪಕ ಉದಯ್ ಮೆಹ್ತಾ ಮತ್ತು ನಿರ್ದೇಶಕ ವಿಜಯ್ ಕಿರಣ್ ಬಹುಮುಖ್ಯ ಕಾರಣ. ಧರ್ಮ ವಿಶ್ ಸಂಗೀತ ನಿರ್ದೇಶನದ ಹಾಡುಗಳಂತೂ ಟ್ರೆಂಡ್ ಕ್ರಿಯೇಟ್ ಮಾಡಿದೆ. ದೊಡ್ಡ ನಟರ ತಾರಾಗಣ, ಅದ್ಭುತವಾದ ತಾಂತ್ರಿಕತೆ ಎಲ್ಲವೂ ಸಿಂಗ ಚಿತ್ರದಲ್ಲಿ ಮೇಳೈಸಿದೆ. ಇದೇ ತಿಂಗಳ ಹತ್ತೊಂಭತ್ತಕ್ಕೆ ಸಿಂಗ ತೆರೆ ಮೇಲೆ ಅಬ್ಬರಿಸಲಿದ್ದಾನೆ. ಶ್ಯಾನೆ ಟಾಪಾಗಿರುವ ಸಿಂಗನ ಹವಾ ರಿಲೀಸಾದಮೇಲೂ ಹೆಚ್ಚಾಗುವಂತಾಗಲಿ..
No Comment! Be the first one.