ಸಮೀರಾ ಸಾಹಸಕ್ಕೆ ನೆಟ್ಟಿಗರು ಸುಸ್ತು!

Picture of Cinibuzz

Cinibuzz

Bureau Report

ಸಿನಿಮಾ ನಟಿಯರು ಅಂದಮೇಲೆ ಮೂರು ಮತ್ತೊಂದು ಶೋಕಿಗಳು ಇದ್ದೇ ಇರುತ್ತದೆ. ಕೆಲವರಿಗೆ ಡ್ರೈವಿಂಗ್ ಹುಚ್ಚಾದರೆ, ಕೆಲವರಿಗೆ ಬಗೆ ಬಗೆಯ ಡ್ರೆಸ್ಸುಗಳನ್ನು ಧರಿಸೋದೇ ದೊಡ್ಡ ಹುಚ್ಚಾಗಿರುತ್ತಾರೆ. ಇನ್ನೂ ಕೆಲವರಿಗೆ ದುಬಾರಿ ಬೆಲೆಯ ಪರಿಕರಗಳನ್ನು ಯೂ ಅಂಡ್ ಥ್ರೂ ಮಾಡುವುದು ಒಂದು ಬಗೆಯ ಹುಚ್ಚಿರುತ್ತದೆ. ಹೀಗೆ ನಾನಾ ಬಗೆಯ ಹುಚ್ಚು ಉರುಫ್ ಶೋಕಿಗೆ ಒಳಗಾಗಿರುವ ಸಿನಿಮಾ ತಾರೆಯರು ದಾರಿಗೊಬ್ಬರಾದರೂ ಸಿಗುತ್ತಲೇ ಇರುತ್ತಾರೆ. ಸದ್ಯ ಅಂತಹುದೇ ಉಮೇದಿಗೆ ಬಿದ್ದ ಸಿನಿಮಾ ತಾರೆಯರ ಪೈಕಿ ವರದನಾಯಕ ಚಿತ್ರದಲ್ಲಿ ಮಿಂಚಿದ್ದ ಸಮೀರಾ ರೆಡ್ಡಿ ಸುದ್ದಿಯಲ್ಲಿದ್ದಾರೆ. ಯೆಸ್ ನಿಮಗೆಲ್ಲರಿಗೂ ತಿಳಿದಿರುವಂತೆ ಆಕೆ ಈಗ ಗರ್ಭಿಣಿ. ಆದರೂ ಮಾಡಬಾರದ ಕೆಲಸಗಳನ್ನೇ ಹೆಚ್ಚು ಮಾಡುತ್ತ ನ್ಯೂಸಾಗುವ ಸಮೀರ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿದ್ದಾರೆ. ಅರೇ.. ಸಮೀರಾ ಅಂತಹದ್ದೇನಪ್ಪ ಮಾಡಿದ್ರೂ ಅಂತ ಯೋಚಿಸ್ತಿದ್ದೀರಾ…

https://www.instagram.com/p/BzfP1QHHUb9/?utm_source=ig_web_copy_link

ಆಕೆ ಗರ್ಭಿಣಿಯಾದಂದಿನಿಂದ ಹುಚ್ಚು ಹುಚ್ಚಾದ ಸಾಹಸಕ್ಕೆ ಬಿದ್ದಿದ್ದು, ಪೂಲ್ ನಲ್ಲಿ ಸ್ವಿಮ್ಮಿಂಗ್ ಮಾಡುವುದು, ಜಿಮ್ ನಲ್ಲಿ ವರ್ಕ್ ಔಟ್ ಮಾಡುವ ಇತ್ಯಾದಿ ಇತ್ಯಾದಿ ಸಾಹಸಕ್ಕೆ ಕೈ ಹಾಕುತ್ತಲೇ ಇದ್ದಾರೆ. ಮೇಲಾಗಿ ಆ ಎಲ್ಲ ಫೋಟೋಗಳನ್ನು ಇನ್ ಸ್ಟಾಗ್ರಾಮಿಗೆ ಶೇರ್ ಮಾಡಿ ಅಭಿಮಾನಿಗಳಿಂದ ಮೆಚ್ಚುಗೆ ಕಮ್ ಮಂಗಳಾರತಿಯನ್ನು ಪಡೆಯುತ್ತಲೇ ಇರುತ್ತಾರೆ. ಇದೀಗ ಸಮೀರಾ ರೆಡ್ಡಿ ಸ್ವಿಮ್ ಸೂಟ್ ನಲ್ಲಿ ಅದೂ ಅಂಡರ್ ವಾಟರ್ ಫೋಟೋ ಶೂಟ್  ಮಾಡಿಸಿಕೊಂಡು ನೋಡುಗರ ಹುಬ್ಬೇರುವಂತೆ ಮಾಡಿದ್ದಾರೆ. ಅಲ್ಲದೇ ಕೆಲವು ಫೋಟೋಗಳನ್ನು ಸಮೀರಾ ಅವರೇ ಇನ್ ಸ್ಟಾಗೆ ಶೇರ್ ಮಾಡಿ ಬರಫೂರ ಕಮೆಂಟುಗಳ ನಿರೀಕ್ಷೆಯಲ್ಲಿದ್ದಾರೆ.

 

ಇನ್ನಷ್ಟು ಓದಿರಿ

Scroll to Top