ಕಾರ್ಗಿಲ್ ನಲ್ಲಿ ಆಡಿಸಿ-ಬೀಳಿಸಿ ನೋಡಿದವರು!

Picture of Cinibuzz

Cinibuzz

Bureau Report

ಮನೋಜ್ ಶ್ರೀಹರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ `ಆಡಿಸಿ ನೋಡು ಬೀಳಿಸಿ ನೋಡು’. ಈ ಚಿತ್ರದ ಕಥೆ, ಚಿತ್ರಕಥೆ, ಸಾಹಿತ್ಯ ಬರೆಯುವುದರೊಂದಿಗೆ ಸಂಗೀತ ಸಂಯೋಜಕರಾಗಿಯೂ ಶ್ರೀಹರಿ ಕಾರ್ಯ ನಿರ್ವಹಿಸಿದ್ದಾರೆ. ರಾಜೇಶ್ ನಟರಂಗ, ಆಶಾ ಭಂಡಾರಿ, ಕಾವ್ಯಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಅಯೋಗ್ಯ ಖ್ಯಾತಿಯ ನಟ, ನಿರ್ಮಾಪಕ ನೀನಾಸಂ ಸತೀಶ್ ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರದ ಆಡಿಯೋ ರಿಲೀಸ್ ಮಾಡಿದರು.

ವಿಶೇಷವೆಂದರೆ ಈ ಚಿತ್ರದ ಹಾಡುಗಳನ್ನು ಚಿತ್ರತಂಡ ಡಿಜಿಟಲ್ ಟೆಕ್ನಾಲಜಿಯ ಕ್ಯೂಆರ್ ಕೋಡ್ ಮೂಲಕ ರಿಲೀಸ್ ಮಾಡಿದೆ. ಕ್ಯಾಸೆಟ್, ಸಿಡಿ, ಪೆನ್‌ಡ್ರೈವ್‌ನಲ್ಲಿ ಹಾಡುಗಳನ್ನು ಕೇಳುವುದು ಈಗ ಕಮ್ಮಿಯಾಗಿದ್ದು, ತಮ್ಮ ಮೊಬೈಲ್‌ನಲ್ಲೇ ನೇರವಾಗಿ ಹಾಡುಗಳನ್ನು ಕೇಳಬಹುದಾಗಿದೆ. ಈ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು ಚಿತ್ರದ ಹಾಡು ಪ್ಲೇ ಆಗುತ್ತದೆ.

ಸತೀಶ್ ಮಾತನಾಡುತ್ತ, ಹೊಸಗಾಗಿ ಇಲ್ಲಿಗೆ ಬರುತ್ತಿರುವವರಿಗೆ ನಾನು ಹೇಳುವುದು ಒಂದೇ ಮಾತು. ಬರುವ ಮುನ್ನ ಚಿತ್ರರಂಗದ ಬಗ್ಗೆ ತಿಳಿದುಕೊಳ್ಳಿ. ಹಾಕಿದ ಬಂಡವಾಳ ಹೇಗೆ ವಾಪಸ್ ಪಡೆಯಬಹುದು ಅಂತ ಅರಿತು ಬನ್ನಿ. ಯಾವುದೋ ಸಿನಿಮಾ ಗಳಿಸಿದ ಆದಾಯ ಇಟ್ಟುಕೊಂಡು ಬಂಡವಾಳ ಹಾಕಬೇಡಿ. ಇಷ್ಟೆಲ್ಲಾ ಗೊತ್ತಿರುವ ನಾನೇ ರಾಕೆಟ್ ಸಿನಿಮಾ ಮಾಡಿದಾಗ ಚೇತರಿಸಿಕೊಳ್ಳಲು ವರ್ಷವೇ ಬೇಕಾಯ್ತು. ಇನ್ನು ಆಡಿಸಿ ನೋಡು, ಬೀಳಿಸಿ ನೋಡು ರಾಜ್‌ಕುಮಾರ್ ಅವರನ್ನು ನೆನಪಿಸುತ್ತದೆ.  ಅದೇ ಚಿತ್ರದಂತೆ ಈ ಚಿತ್ರ ಹಿಟ್ ಆಗಲಿ ಎಂದು ಹಾರೈಸಿದರು.

ನಿರ್ದೇಶಕ ಮನೋಜ್ ಮಾತನಾಡಿ, ಇದೊಂದು ಮಲ್ಟಿ ಲೇಯರ್ ಸಿನಿಮಾ. ಮೊದಲು ಸಾಹಿತ್ಯ ಮಾಡಿಕೊಂಡಿದ್ದೆ. ನಿರ್ಮಾಪಕರು ನೀನೇ ನಿರ್ದೇಶನ ಮಾಡು ಎಂದರು ಹೇಳಿದರು. ಶೇ.೪೦ರಷ್ಟು ಕಾರ್ಗಿಲ್‌ನಲ್ಲೇ ಶೂಟ್ ಮಾಡಿದ್ದೇವೆ ಎಂದು ಹೇಳಿದರು.

ಪೂರ್ಣಚಂದ್ರ ತೇಜಸ್ವಿ ಅವರ ಹೊಸ ಆಡಿಯೋ ಕಂಪನಿ ಮೂಲಕ ಈ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಚಿತ್ರದ ಕ್ಯಾಮೆರಾವರ್ಕ್‌ನ್ನು ರವಿವರ್ಮ ಹಾಗೂ ಮನೋಜ್ ಶ್ರೀಹರಿ ನಿರ್ವಹಿಸಿದ್ದಾರೆ. ರಾಜೇಶ್ ನಟರಂಗ ಅಂದು ಪ್ರೆಸ್‌ಮೀಟ್‌ನಲ್ಲಿ ಭಾಗವಹಿಸಿರಲಿಲ್ಲ.

ಇನ್ನಷ್ಟು ಓದಿರಿ

Scroll to Top