ಹಾಡುಗಳ ಟರ್ನಿಂಗ್ ಪಾಯಿಂಟ್

Picture of Cinibuzz

Cinibuzz

Bureau Report

ಎಂಥವರ ಜೀವನದಲ್ಲೀ ’ಟರ್ನಿಂಗ್ ಪಾಯಿಂಟ್’ ಎನ್ನುವುದು ಆಗಾಗ ಎದುರಾಗುತ್ತಲೇ ಇರುತ್ತದೆ. ಅಲ್ಲಿ ಮನುಷ್ಯ ಏಳಲೂಬಹುದು, ಬೀಳಲೂಬಹುದು! ಈಗ ಹೊಸ ಚಿತ್ರತಂಡವೊಂದು ಇದೇ ಹೆಸರಿಟ್ಟುಕೊಂಡು ಸಿನಿಮಾವೊಂದನ್ನು ನಿರ್ಮಿಸಿದೆ.  ತಾಯಿ-ಮಗನ ಬಾಂದವ್ಯ ಹಾಗೂ ಲವ್‌ಸ್ಟೋರಿ ಹೀಗೆ  ಎರಡು  ಟ್ರ್ಯಾಕ್‌ಗಳಲ್ಲಿ ಈ ಚಿತ್ರದ ಕತೆ ಸಾಗುತ್ತದೆ. ಸಿಕ್ಕಿಂನಲ್ಲಿ ಶುರುವಾಗುವ ಕಥೆ ಕರ್ನಾಟಕದಲ್ಲಿ  ಕೊನೆಗೊಳ್ಳುತ್ತದೆ.  ಚಿಕ್ಕ ವಯಸಿನಲ್ಲೇ ಪೋಷಕರಿಂದ ದೂರವಾಗಿದ್ದ ನಾಯಕ  ದೊಡ್ಡವನಾದ ಮೇಲೆ ತನ್ನ  ತಾಯಿಯನ್ನು ಹುಡುಕಿಕೊಂಡು ಕರ್ಲಾಟಕಕ್ಕೆ  ಬಂದಾಗ ಆತನಿಗೆ ತನ್ನ  ಮನೆಯಲ್ಲಿ  ಒಂದು ಅಚ್ಚರಿ ಕಾದಿರುತ್ತದೆ  ಅದರ ಹಿನ್ನಲೆ ಏನು, ಯಾವ ಕಾರಣಕ್ಕೆ ಎಂದು ನಾಯಕ ಹುಡುಕುತ್ತ ಹೋಗುವುದೇ ಟರ್ನಿಂಗ್ ಪಾಯಿಂಟ್ ಚಿತ್ರದ ಕಥೆ. ಈ ಹಂತದಲ್ಲಿ ಸಾಕಷ್ಟು ತಿರುವುಗಳು ಬಿಚ್ಚಿಕೊಳ್ಳುತ್ತವೆ. ಒಂದು ಡೈರಿಯಿಂದ ಕಥೆ ಶುರುವಾಗುತ್ತದೆ. ಸಿಕ್ಕಿಂ, ಮಡಿಕೇರಿ, ಸುಳ್ಯ, ಕುಶಾಲನಗರ ಮತ್ತು ಬೆಂಗಳೂರಿನಲ್ಲಿ ಈ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ.

ನಿಜ ಜೀವನದಲ್ಲಿ ತನ್ನ ತಾಯಿಯ ಆಸೆಯಂತೆ ಬಣ್ಣ ಹಚ್ಚಿರುವ ನಾಯಕ ಆದಿಕೇಶವಲು  ತೆರೆಯ ಮೇಲೆ ಅಮ್ಮನನ್ನು ಹುಡುಕುವ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೈದರಬಾದ್‌ನ ಅನಿಕರಾವ್ ಹಾಗೂ ದಿಶಾ ಪೂವಯ್ಯ ಚಿತ್ರದ ಇಬ್ಬರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ದಿಸಾ ಪಾತ್ರ ನೆಗಟೀವ್ ಶೇಡ್‌ದಲ್ಲಿ ಬರುತ್ತದೆ. ನಾಯಕನ ತಂದೆಯಾಗಿ ಶ್ರೀನಿವಾಸಮೂರ್ತಿ, ಸಾಕು ತಂದೆಯಾಗಿ ಜೊಸೈಮನ್, ಖಳನಾಗಿ ಉಗ್ರಂ ಮಂಜು,  ಜೈಜಗದೀಶ್, ವಿನಯ ಪ್ರಸಾದ್ ನಟಿಸಿದ್ದಾರೆ.  ಚಿತ್ರದ ನಾಲ್ಕು ಹಾಡುಗಳಿಗೆ  ಎ.ಟಿ.ರವೀಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಎ.ಆರ್. ವಿನ್ಸೆಂಟ್ ಚಿತ್ರದ ಛಾಯಾಗ್ರಹಣ ಕೆಲಸ ನಿರ್ವಹಿಸಿದ್ದಾರೆ. ವಿನು ಮಹೇಶ್ ರೈ ಇದೇ ಮೊದಲಬಾರಿಗೆ  ಕತೆ, ಚಿತ್ರಕತೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ. ರಾಮನಗರದ ವಿ.ನಾಗರಾಜು, ಮನೋಜ್‌ಗೌಡ, ರಮೇಶ್ ಪೂಜಾರಿ ಚಿತ್ರದ ನಿರ್ಮಾಪಕರು. ಈ ಚಿತ್ರದ ಸಿಡಿಯನ್ನು ಶಾಸಕಿ ಸೌಮ್ಯ ರೆಡ್ಡಿ, ಪ್ರೊ.ದೊಡ್ಡರಂಗೇಗೌಡ ಸೇರಿ ಬಿಡುಗಡೆ ಮಾಡಿದರು.

ಇನ್ನಷ್ಟು ಓದಿರಿ

Scroll to Top