ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ ಮಂದಣ್ಣ!

Picture of Cinibuzz

Cinibuzz

Bureau Report

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ಚಿತ್ರದ ಯಶಸ್ಸಿನ ನಂತರ ಹಿಂತಿರುಗಿ ನೋಡದ ಮಟ್ಟಿಗೆ ಯಶಸ್ಸಿನ ಪಯಣದತ್ತ ಸಾಗಿದ ರಶ್ಮಿಕಾ ಕನ್ನಡವೂ ಸೇರಿದಂತೆ ತೆಲುಗು, ತಮಿಳು ರಂಗದಲ್ಲಿ ಕಡಿಮೆ ಅವಧಿಯಲ್ಲಿಯೇ ಬೇಡಿಕೆ ಸೃಷ್ಟಿಸಿಕೊಂಡವರು.

ಸ್ಟಾರ್ ನಟರೊಂದಿಗೆ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡಿರುವ ರಶ್ಮಿಕಾ ಸಂಭಾವನೆ 75 ಲಕ್ಷಕ್ಕೆ ಏರಿಕೆ ಆಗಿದೆ ಎಂದು ನ್ಯೂಸಾಗಿತ್ತು. ಆದರೆ ಸದ್ಯ ಬರೋಬ್ಬರಿ ಒಂದು ಕೋಟಿಗೆ ಸಂಭಾವನೆಯನ್ನು ರಶ್ಮಿಕಾ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಯೆಸ್.. ತಮಿಳಿನ ಸೂಪರ್ ಸ್ಟಾರ್ ವಿಜಯ್ ಜತೆ ರಶ್ಮಿಕಾ ನಟಿಸಬೇಕೆಂಬುದು ನಿರ್ಮಾಪಕರ ಒತ್ತಾಸೆಯಾಗಿದ್ದು, ಆಕೆಯೇ ನಾಯಕಿಯಾಗಬೇಕೆಂದು ಪಟ್ಟು ಹಿಡಿದು ಕೂತಿದ್ದಾರಂತೆ. ಇದನ್ನು ಎನ್ ಕ್ಯಾಶ್ ಮಾಡಿಕೊಂಡು ರಶ್ಮಿಕಾ ಒಂದು ಕೋಟಿ ಸಂಭಾವನೆ ಕೇಳಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಓದಿರಿ

Scroll to Top