ಮಿನರ್ವ ಮಿಲ್ ನಲ್ಲಿ ಕೆಜಿಎಫ್ ಟೀಮ್!

Picture of Cinibuzz

Cinibuzz

Bureau Report

ಕನ್ನಡದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 1 ತಾಂತ್ರಿಕ ನೈಪುಣ್ಯತೆಯಿಂದಲೇ ಹೆಚ್ಚು ಸುದ್ದಿಯಾದದ್ದು. ಮೈನಿಂಗ್ ಪ್ರದೇಶವನ್ನೇ ಕಣ್ಣಿಗೆ ಕಟ್ಟುವಂತೆ ಸೆಟ್ಟು ಹಾಕಿ ನೋಡುಗರ ಕಣ್ಣರಳುವಂತೆ ಮಾಡಿತ್ತು ಕೆಜಿಎಫ್ ಟೀಮ್. ಸದ್ಯ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಮತ್ತದೇ ನವ ನವೀನ ಸೆಟ್ ಗಳ ಮೊರೆ ಹೋಗಿದೆ. ಯೆಸ್ ಬೆಂಗಳೂರಿನ ಮಿನರ್ವ ಮಿಲ್ ಸ್ಥಳದಲ್ಲಿ ಬೃಹತ್ ಸೆಟ್ ಗಳು ತಲೆ ಎತ್ತಿ ನಿಂತಿವೆ. ಹಳೆ ಬಾಂಬೆಯನ್ನೇ ಸೃಷ್ಟಿಸುವ ಸಾಹಸಕ್ಕಿಳಿದಿರುವ ಚಿತ್ರತಂಡ 345ಕ್ಕೂ ಅಧಿಕ ಕೆಲಸಗಾರರು 44 ದಿನ ಸೆಟ್ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರಂತೆ.

ಇನ್ನಷ್ಟು ಓದಿರಿ

Scroll to Top