ಅಭಿಮಾನಿಗಳ ಜತೆ ಡೈರೆಕ್ಟ್ ಲಿಂಕು, ಮಾತುಕತೆ ನಡೆಸಲು, ತಮ್ಮ ತಮ್ಮ ಸಿನಿಮಾಗಳ ಅಪ್ ಡೇಟ್ ಗಳನ್ನು ನೀಡುವ ಸಲುವಾಗಿ ಸೆಲೆಬ್ರೆಟಿಗಳೆಲ್ಲ ಸೋಶಿಯಲ್ ಮೀಡಿಯಾದ ಮೊರೆ ಹೋಗಿದ್ದಾರೆ. ಫೇಸ್ ಬುಕ್, ಟ್ವಿಟ್ಟರ್, ಇನ್ ಸ್ಟಾಗ್ರಾಂ ಇತ್ಯಾದಿಯಾಗಿ ಸಾಕಷ್ಟು ಜಾಲತಾಣಗಳಲ್ಲಿ ಸ್ವಂತ ಖಾತೆಯನ್ನು ಹೊಂದುವ ಮೂಲಕ ಫ್ಯಾನ್ ಗಳ ಜತೆ ಲಘುಬಗೆಯಿಂದ ಇರಲು ಪ್ರಯತ್ನಿಸುತ್ತಲೇ ಇರುತ್ತಾರೆ. ಈ ಪೈಕಿ ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್, ಜಗ್ಗೇಶ್, ಗಣೇಶ್ ಆದಿಯಾಗಿ ಬಹಳಷ್ಟು ಸೆಲೆಬ್ರೆಟಿಗಳು ಸ್ಟ್ರಾಂಗಾಗಿಯೇ ಸಕ್ರಿಯರಾಗಿದ್ದಾರೆ.
https://www.instagram.com/p/BzfkxStAU6O/?utm_source=ig_web_copy_link
ಇದೀಗ ಈ ಪಟ್ಟಿಗೆ ಪೊಗರು ಧ್ರುವ ಸರ್ಜಾ ಸೇರ್ಪಡೆಯಾಗಿದ್ದಾರೆ. ಇಲ್ಲಿಯವರೆಗೂ ಸೋಶಿಯಲ್ ಮೀಡಿಯಾದಲ್ಲಿ ಗ್ಯಾಪ್ ಮೇನ್ ಟೇನ್ ಮಾಡಿದ್ದ ಧ್ರುವ ಸರ್ಜಾ ಇದೀಗ ಇನ್ ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದಾರೆ. ಅಲ್ಲದೇ ನಿರಂತರವಾಗಿ ತಮ್ಮ ಸಿನಿಮಾಗಳ ಅಪ್ ಡೇಟ್ಸ್ ಗಳನ್ನು ನೀಡಲಿದ್ದಾರೆ. ವಿಶೇಷವೆಂದರೆ ಖಾತೆ ಓಪನ್ ಮಾಡಿದ ಒಂದೇ ದಿನಕ್ಕೆ ಲಕ್ಷಾಂತರ ಫ್ಯಾನ್ಸ್ ಗಳು ತಮ್ಮ ನೆಚ್ಚಿನ ನಟನನ್ನು ಫಾಲೋ ಮಾಡುತ್ತಿದ್ದಾರೆ. ಇನ್ನು ಧ್ರುವ ಸರ್ಜಾಗೆ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ವೆಲ್ ಕಮ್ ಮಾಡಿದ್ದು, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಧ್ರುವ ಜೊತೆಗಿನ ಬಾಲ್ಯದ ಫೋಟೋ ಹಂಚಿಕೊಂಡಿದ್ದಾರೆ.











































