ಜುಲೈ ಏಳನೇ ತಾರೀಖು ಕುರುಕ್ಷೇತ್ರ ಸಿನಿಮಾದ ಆಡಿಯೋ ರಿಲೀಸ್ ಆಗಲಿದೆ. ಈ ಮಧ್ಯೆ ಆಡಿಗೆ ಬಿಡುಗಡೆ ಕಾರ್ಯಕ್ರಮದ ಪಾಸ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫೋಟೋ ಇಲ್ಲದ ಕಾರಣ ಅಭಿಮಾನಿಗಳು ಚಿತ್ರತಂಡದ ಮೇಲೆ ಬೇಸರ ವ್ಯಕ್ತಪಡಿಸಿದ್ದರು. ಅವರ ಮನತಣಿಸಲೆಂದೇ ಇದೀಗ ದರ್ಶನ್ ಫೋಸ್ಟರ್ ರಿಲೀಸ್ ಆಗಿದ್ದು, ಅಭಿಮಾನಿಗಳು ಸಂತಸಪಡುವಂತಾಗಿದೆ.

ಇನ್ನು ಪೋಸ್ಟರ್ ನಲ್ಲಿ ಸೊಂಟದ ಮೇಲೆ ಕೈ ಇಟ್ಟುಕೊಂಡು ದರ್ಶನ್ ಗಾಂಭೀರ್ಯದಿಂದ ನಿಂತಿದ್ದಾರೆ. ಅಲ್ಲದೇ ಫೋಸ್ಟರ್ ಬಲಭಾಗದಲ್ಲಿ ದರ್ಶನ್ 50ನೇ ಸಿನಿಮಾ ಎಂದು ಬರೆಯಲಾಗಿದೆ. ಈ ಹಿಂದೆ ಬಂದ ಪೋಸ್ಟರ್ ನಲ್ಲಿ ಅದಿರಲಿಲ್ಲ. ಇನ್ನು ಮುನಿರತ್ನ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ತಾರಾಂಗಣದಲ್ಲಿ ದರ್ಶನ್, ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ಶಶಿಕುಮಾರ್, ಭಾರತಿ ವಿಷ್ಣುವರ್ಧನ್ ಸೇರಿದಂತೆ ಮತ್ತಿತರರು ನಟಿಸಿದ್ದಾರೆ.











































