ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಶರ್ಮಿಳಾ ಅದಾದ ಮೇಲೆ ಏನಾದ್ರೂ ಅನ್ನೋದೇ ಚಂದನವನದಲ್ಲಿ ಯಾರಿಗೂ ತಿಳಿಯದಾಗಿತ್ತು. ಬಣ್ಣದ ಲೋಕದಲ್ಲಿ ಗೇಟ್ ಪಾಸ್ ತಗೊಂಡಿದ್ದಾರಾ ಅನ್ನೋ ಅನುಮಾನಗಳು ಅಭಿಮಾನಿಗಳಲ್ಲಿತ್ತು. ಯಾವಾಗ ಗಾಳಿಪಟ 2ನಲ್ಲಿ ಶರ್ಮಿಳಾ ಮಾಂಡ್ರೆ ಇದ್ದಾರೆನ್ನುವ ಸುದ್ದಿ ಹರಡಿಕೊಂಡಿತ್ತೋ ಆಗಷ್ಟೇ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದರು.
https://www.instagram.com/p/By47YUlncmb/?utm_source=ig_web_copy_link
ಸದ್ಯ ಶರ್ಮಿಳಾ ಮಾಂಡ್ರೆ ಹಾಟ್ ಹಾಟ್ ಆಗಿಯೇ ಫ್ಯಾನ್ಸ್ ಗಳಿಗೆ ದರ್ಶನ ಕೊಟ್ಟಿದ್ದಾರೆ. ಯೆಸ್.. ಇಂಡೋನೇಷಿಯಾ ಪ್ರವಾಸದಲ್ಲಿರುವ ಶರ್ಮಿಳಾ ಸ್ವಿಮ್ ಸೂಟ್ ನಲ್ಲಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಕೆಂಪು ಬಣ್ಣದ ಕಾಸ್ಟ್ಯೂಂ ಧರಿಸಿರುವ ಮಾಂಡ್ರೆ ಲುಕ್ಕು ಪಡ್ಡೆಹುಡುಗರ ಮೈ ಬಿಸಿಯೇರಿಸಿದೆ. ಮಾದಕ ಮೈಮಾಟದ ಶರ್ಮಿಳಾ ಹೊಸ ಲುಕ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೇ ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗಿ ಬರಪೂರ ಕಮೆಂಟುಗಳು ಬರಲು ಶುರುವಾಗಿದೆ.











































