777 ಚಾರ್ಲಿ ಹೊಸ ಪೋಸ್ಟರ್!

Picture of Cinibuzz

Cinibuzz

Bureau Report

ಒಂದು ಮೊಟ್ಟೆಯ ಕಥೆಯ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ನಟ ರಾಜ್ ಬಿ ಶೆಟ್ಟಿ. ಅದಾದ ಮೇಲೆ ಅಮ್ಮಚ್ಚಿಯ ನೆನಪು ಎಂದ ಸೃಜನಾತ್ಮಕ ಚಿತ್ರದಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದ್ದ ಮೊಟ್ಟೆ ಶೆಟ್ಟಿ ಸದ್ಯ 777 ಚಾರ್ಲಿಯಲ್ಲಿ ವಿಶೇಷ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ 777 ಚಾರ್ಲಿ ಚಿತ್ರತಂಡ ಅವರದೇ ಫೋಸ್ಟರ್ ರಿಲೀಸ್ ಮಾಡುವ ಮೂಲಕ ಶೆಟ್ಟಿ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದೆ.

ಪೋಸ್ಟರ್ ನಲ್ಲಿ ಶೆಟ್ಟಿ ಸ್ಕೆತಾಸ್ಕೋಪ್ ಹಿಡಿದು ನಾಯಿಯೊಂದನ್ನು ಟೆಸ್ಟ್ ಮಾಡುತ್ತಿದ್ದಾರೆ. ಒಂದು ನಾಯಿಯ ಸುತ್ತಲೇ ಸಾಗುವ 777 ಚಾರ್ಲಿಯಲ್ಲಿ ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ವಿಶೇಷವಾಗಿ ಹೇಳುವ ಪ್ರಯತ್ನವನ್ನು ಮಾಡಲಾಗಿದೆ. ಈ ಚಿತ್ರವನ್ನು ಕಿರಣ್ ರಾಜ್ ಕೆ ನಿರ್ದೇಶನ ಮಾಡಿದ್ದು, ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ. ಇನ್ನು ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top