ನವಜೀವನಕ್ಕೆ ಕಾಲಿಟ್ಟ ನುಸ್ರತ್ ಜಹಾನ್!

Picture of Cinibuzz

Cinibuzz

Bureau Report

ತೃಣಮೂಲ ಕಾಂಗ್ರೆಸ್ ಹಾಲಿ ಸಂಸದೆ ಮತ್ತು ನಟಿ ನುಸ್ರತ್ ಜಹಾನ್ ಮತ್ತು ನಿಖಿಲ್ ಜೈನ್ ಅವರ ರಿಸೆಪ್ಷೆನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿದೆ. ಯೆಸ್. ಲೋಕಸಭಾ ಚುನಾವಣೆಯಲ್ಲಿ ಗೆದ್ದು ಎಂಪಿ ಆದ ಬಳಿಕ ನುಸ್ರತ್ ಮದುವೆಯಾಗಿದ್ದು, ಆರತಕ್ಷತೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಸ್ನೇಹಿತರು ಮತ್ತು ಸಂಬಂಧಿಕರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು.

ಕಾರ್ಯಕ್ರಮದಲ್ಲಿ ನುಸ್ರುತ್ ವೈನ್ ಬಣ್ಣದ ವೆಲ್ವೆಟ್ ಲೆಹೆಂಗಾದಲ್ಲಿ ಕಾಣಿಸಿಕೊಂಡರೆ ಸೂಟ್ ನಲ್ಲಿ ನಿಖಿಲ್ ಜೈನ್ ಮಿಂಚಿದ್ದಾರೆ. ಇನ್ನು ತೊಟ್ಟಿದ್ದ ಡ್ರೆಸ್ಸಿಗನುಗುಣವಾಗಿ ನುಸ್ರತ್ ಸಿಂಪಲ್ ಆಗಿ ಮೇಕಪ್ ಕೂಡ ಮಾಡಿಕೊಂಡಿದ್ದು, ನೋಡುಗರ ಕಣ್ಣು ಕುಕ್ಕುವಂತೆ ಕಾಣುತ್ತಿದ್ದರು. ಇನ್ನು ಬಿಗಿ ಬಂದೋಬಸ್ತ್ ನಲ್ಲಿ ಕಾರ್ಯಕ್ರಮವು ನಡೆದಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ವಿಶೇಷ ಆಹ್ವಾನಿತರೂ ಕಾರ್ಯಕ್ರಮಕ್ಕೆ ಆಗಮಿಸಿ ನವ ವಧು ವರರಿಗೆ ಶುಭಕೋರಿದರು.

ಇನ್ನಷ್ಟು ಓದಿರಿ

Scroll to Top