ಹಾಸಿಗೆ ಹಂಚಿಕೊಂಡರೇ ಸಿನಿಮಾದಲ್ಲಿ ಚಾನ್ಸು ಕೊಡ್ತೀನಿ!

Picture of Cinibuzz

Cinibuzz

Bureau Report

ಕಲರ್ ಸ್ಟ್ರೀಟ್ ನಲ್ಲಿ ಕಲರ್ ಕಲರ್ ಲೈಂಗಿಕ ಪ್ರಕರಣಗಳು, ಕಿರುಕುಳಗಳು, ದೌರ್ಜನ್ಯಗಳ ಕುರಿತಾಗಿ ಪ್ರತಿದಿನವೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ನ್ಯೂಸ್ ಚಾನೆಲ್, ಪೇಪರ್ ಗಳಲ್ಲಿ ನೋಡುತ್ತಲೇ ಇರುತ್ತೇವೆ. ಹೀಗೆ ನಡೆದ  ಸಾಕಷ್ಟು ಲೈಂಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತದೆ. ಪ್ರಜ್ಞಾವಂತ ನಟಿಯರು ದಿಟ್ಟತನದಿಂದ ಸಾಕಷ್ಟು ತೆರೆ ಮರೆಯ ಕಳ್ಳಾಟಗಳನ್ನು ಬಹಿರಂಗಪಡಿಸಿದ್ದಾರೆ. ಕಾಮುಕರ ಮುಖವಾಡವನ್ನು ಕಳಚಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಎಲ್ಲ ಇಂಡಸ್ಟ್ರಿಯಲ್ಲೂ ಇದೂ ಕಾಮನ್ನೂ ಕೂಡ. ಇನ್ನು ಮೀಟೂ ಅಭಿಯಾನದ ಸ್ಟ್ರಾಂಗ್ ಆದ ಮೇಲಂತೂ ಹಳ್ಳ ಹಿಡಿದಿದ್ದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದು ಪ್ರೇಕ್ಷಕರಿಗೂ ಪ್ರತಿಷ್ಠಿತರ ಅಸಲಿಯತ್ತು ಪರಿಚಯವಾಗಿದೆ. ಸದ್ಯ ಮಲಯಾಳಂ ಚಿತ್ರರಂಗದ ಯುವ ನಟಿ ಗಾಯತ್ರಿ ಸುರೇಶ್ ಕೂಡ ಲೇಟೆಸ್ಟಾಗಿ ಮೀಟೂ ಆರೋಪ ಮಾಡಿದ್ದಾರೆ. ತಾವು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಆರಂಭದಲ್ಲಿ ಲೈಂಗಿಕ ಕಿರುಕುಳವನ್ನು ಎದುರಿಸಿರುವುದಾಗಿಯೂ ಹೇಳಿಕೆ ಕೊಟ್ಟಿದ್ದಾರೆ.

ಅವಕಾಶಗಳಿಗೆ ಸಾಕಷ್ಟು ಡೈರೆಕ್ಟರ್, ಪ್ರೊಡ್ಯೂಸರ್ ಗಳ ಮನೆ, ಆಫೀಸ್ ಬಾಗಿಲು ತಟ್ಟುವಾಗ ಕಾಂಪ್ರಮೈಸ್ ಆಗ್ತೀಯಾ ಎಂದೂ ಒತ್ತಾಯ ಮಾಡುತ್ತಿದ್ದರಂತೆ. ಹಾಸಿಗೆ ಹಂಚಿಕೊಂಡರೆ ಬೇಕಾದಷ್ಟು ಅವಕಾಶಗಳ ಸುರಿಮಳೆಯನ್ನು ಸುರಿಸುವುದಾಗಿಯೂ ಭರವಸೆ ಕೊಡುತ್ತಿದ್ದರಂತೆ. ಆದರೆ ಹಾಗೆ ಅಪ್ರೋಚ್ ಮಾಡಿದವರು ಯಾರೆಂದು ಮಾತ್ರ ಗಾಯತ್ರಿ ಬಿಟ್ಟು ಕೊಡದೇ ಸೀಕ್ರೆಟ್ ಕಾಯ್ದುಕೊಂಡಿದ್ದಾರೆ. ಮೂಲತಃ ಮಾಡೆಲ್ ಆಗಿದ್ದ ಗಾಯತ್ರಿ 2015ರಲ್ಲಿ ಜಮ್ನ ಪ್ಯಾರಿ ಚಿತ್ರದ ಮೂಲಕ ಮಲಯಾಳಂ ಸಿನಿಮಾ ಇಂಡಸ್ಟ್ರಿಗೆ ಪ್ರವೇಶ ಮಾಡಿದ ಗಾಯಿತ್ರಿ ಇಲ್ಲಿಯವರೆಗೂ ಸುಮಾರು 10ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top