ಚಂದನವನಕ್ಕೂ ಕಾಲಿಟ್ಟ ಬಾಟಲ್ ಕ್ಯಾಪ್ ಓಪನ್ ಚಾಲೆಂಜ್!

Picture of Cinibuzz

Cinibuzz

Bureau Report

ಭಾರತದಾದ್ಯಂತ ಕೀಕಿ ಚಾಲೆಂಜ್ ನ ನಂತರ ಪ್ರಸ್ತುತ ಸದ್ದು ಮಾಡುತ್ತಿರುವ ಚಾಲೆಂಜ್ ಬಾಟಲ್ ಕ್ಯಾಪ್ ಓಪನ್ ಚಾಲೆಂಜ್. ಈಗಾಗಲೇ ಬಿ ಟೌನಿನಲ್ಲಿ ಈ ಚಾಲೆಂಜ್ ಸ್ವೀಕರಿಸಿದ ಬಹಳಷ್ಟು ತಾರಾಮಣಿಗಳು ತಾವು ಚಾಲೆಂಜ್ ಅಕ್ಸೆಪ್ಟ್ ಮಾಡಿ, ಮತ್ತೊಬ್ಬರಿಗೆ ಮಾಡುವಂತೆ ಸವಾಲು ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ.

https://twitter.com/Official_Ganesh/status/1146286990125686789

ಈ ಮಧ್ಯೆ ಈ ಬಾಟಲ್ ಕ್ಯಾಪ್ ಓಪನ್ ಚಾಲೆಂಜ್ ಚಂದನವನಕ್ಕೂ ಕಾಲಿಟ್ಟಿದ್ದು, ಅರ್ಜುನ್ ಸರ್ಜಾ, ರಚಿತಾ ರಾಮ್, ಸೇರಿದಂತೆ ಸ್ಯಾಂಡಲ್ ವುಡ್ ನ ಸೆಲೆಬ್ರೆಟಿಗಳು ಈ ಚಾಲೆಂಜನ್ನು ಸ್ವೀಕರಿಸಿ, ತಮ್ಮ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಇದೀಗ ಈ ಬಾಟಲ್ ಕ್ಯಾಪ್ ಓಪನ್ ಚಾಲೆಂಜನ್ನು ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಅಲ್ಲದೇ ಇದನ್ನು ತಮ್ಮ ಟ್ವಿಟರ್ ಪೇಜ್ ನಲ್ಲೂ ಶೇರ್ ಮಾಡಿ ತಮ್ಮ ಸ್ನೇಹಿತರಿಗೂ ಚಾಲೆಂಜ್ ಸ್ವೀಕರಿಸುವಂತೆ ಆಹ್ವಾನವನ್ನು ನೀಡಿದ್ದಾರೆ.

ಇನ್ನಷ್ಟು ಓದಿರಿ

Scroll to Top