ಪವರ್ ಸ್ಟಾರ್ ಮಗಳ ಸೋಶಿಯಲ್ ಸರ್ವೀಸ್!

Picture of Cinibuzz

Cinibuzz

Bureau Report

ಡಾ. ರಾಜ್ ಕುಮಾರ್ ಕುಟುಂಬ ಜಮಾನದಿಂದಲೂ ಒಂದಿಲ್ಲೊಂದು ಸಮಾಜ ಸೇವೆಯಲ್ಲಿ ತೊಡಗಿಕೊಂಡು ಬರುತ್ತಲೇ ಇದೆ. ಡಾ. ರಾಜ್ ಕುಮಾರ್ ಅವರು ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿ ಅಂಧರಿಗೆ ಬೆಳಕಾದರೆ ಅವರ ಮಕ್ಕಳು ದೇಹ ದಾನವನ್ನು ಮಾಡಿ ತಂದೆ ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿದ್ದಾರೆ. ಇಂತಹ ಮಾದರಿ ಕುಟುಂಬದಿಂದ ಬಂದ ಪವರ್ ಸ್ಟಾರ್ ಮಗಳು ಧೃತಿ ಇಂತಹುದೇ ಮಹತ್ವದ ಕಾರ್ಯಕ್ಕೆ ದಾಪುಗಾಲಿಟ್ಟಿದ್ದಾರೆ.

ಯೆಸ್.. ಪುನೀತ್ ರಾಜ್ ಕುಮಾರ್ ಅವರ ಹಿರಿಯ ಪುತ್ರಿ ಧೃತಿ ಪುನೀತ್ ರಾಜ್ ಕುಮಾರ್ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ವೃದ್ಧರಿಗೆ ನೆರವು ನೀಡಲು ಅಭಿಯಾನವೊಂದನ್ನು ಶುರು ಮಾಡಿದ್ದಾರೆ. ವಿಶೇಷವೆಂದರೆ ಈ ಅಭಿಯಾನಕ್ಕೆ ಯಾರು ಬೇಕಾದರೂ ಹಣ ಸಂದಾಯ ಮಾಡಬಹುದು. ಅದರಿಂದ ಬರುವ ಹಣವನ್ನು ಕಣ್ಣಿನ ಚಿಕಿತ್ಸೆಗೆ ಬಳಸಿಕೊಳ್ಳಲು ನಿರ್ಧರಿಸಿದ್ದಾರಂತೆ. ಜತೆಗೆ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಪವರ್ ಸ್ಟಾರ್ ಮಗಳೇ ಬರಿಸಲಿದ್ದಾರೆ.

ಇನ್ನಷ್ಟು ಓದಿರಿ

Scroll to Top