ಮತ್ತೊಂದು ಸಲಿಂಗ ಕಾಮದ ಚಿತ್ರದಲ್ಲಿ ಸ್ವರಾ ಭಾಸ್ಕರ್!

Picture of Cinibuzz

Cinibuzz

Bureau Report

ಬಾಲಿವುಡ್ ನ ಏಕ್ ಲಡ್ಕಿ ಕೋ ದೇಖಾ ತೋಹ್ ಐಸಾ ಲಗಾ ಎಂಬ ಮಹಿಳೆಯ ನಡುವಿನ ಸಲಿಂಗ ಕಾಮಿ ಸಿನಿಮಾದ ನಂತರ ಮತ್ತೊಂದು ಅಂತಹುದೇ ಸಿನಿಮಾ ಸೆಟ್ಟೇರಲಿದೆ. ಆ ಚಿತ್ರಕ್ಕೆ ಶೀರ್ ಖುರ್ಮಾ ಎಂದು ಹೆಸರಿಟ್ಟಿದ್ದು, ಸ್ವರಾ ಭಾಸ್ಕರ್ ಮತ್ತು ದಿವ್ಯಾ ದತ್ತಾ ಸಲಿಂಗಿ ಪ್ರೇಮಿಗಳಾಗಿ ನಟಿಸಲಿದ್ದಾರೆ.

ಈ ಚಿತ್ರವನ್ನು ಫರಾಜ್ ಆರಿಫ್ ನಿರ್ದೇಶನ ಮಾಡುತ್ತಿದ್ದು, ಹಿರಿಯ ನಟಿ ಸುರೇಖಾ ಸಿಕ್ರಿ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರೀ ಪ್ರೊಡಕ್ಷನ್ ಸಮಯದಲ್ಲಿಯೇ ದಿವ್ಯಾ ದತ್ತಾ ಮತ್ತು ಸ್ವರಾಭಾಸ್ಕರ್ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಶೀರ್ ಖುರ್ಮಾ ಕಥೆಯನ್ನು ಸಿದ್ಧಪಡಿಸಿದ್ದು, ಈಗಾಗಲೇ ಅವರಿಬ್ಬರೂ ನಟಿಸಲು ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ವಿಶೇಷವೆಂದರೆ ಇದು ಮಹಿಳಾ ಕೇಂದ್ರಿತ ಚಿತ್ರವಾಗಿರುವುದಿಂದ ಪುರುಷ ಪಾತ್ರಗಳು ಅಷ್ಟೇನೂ ಕಾಣಿಸಿಕೊಂಡಿಲ್ಲವಂತೆ. ಕಳೆದ ವರ್ಷ ವೀರೆ ದಿ ವೆಡ್ಡಿಂಗ್ ನಲ್ಲಿ ಕಾಣಿಸಿಕೊಂಡಿದ್ದ ಸ್ವರಾ ಭಾಸ್ಕರ್ ಅದಾದ ಮೇಲೆ ಯಾವುದೇ ಸಿನಿಮಾಗಳಲ್ಲಿಯೂ ನಟಿಸಿರಲಿಲ್ಲ.

ಇನ್ನಷ್ಟು ಓದಿರಿ

Scroll to Top