ಕುರುಕ್ಷೇತ್ರದ ರಿಲೀಸ್ ನ ಬಿಸಿಯಲ್ಲಿರುವ ಚಾಲೆಂಜಿಂಗ್ ಸ್ಟಾರ್ ಆಗಸ್ಟ್ ಮೊದಲನೇ ವಾರದಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರಂತೆ. ಯೆಸ್… ದರ್ಶನ್ ಅಭಿನಯದ ಒಡೆಯ ಚಿತ್ರದ ಸಾಂಗ್ ಚಿತ್ರೀಕರಣದ ಸಲುವಾಗಿ ವಿದೇಶಕ್ಕೆ ಹಾರಲಿದ್ದಾರೆ. ಅಂದಾಜು 15 ದಿನಗಳ ಕಾಲ ಆಸ್ಟ್ರೇಲಿಯಾದಲ್ಲಿಯೇ ಬೀಡು ಬಿಡಲಿರುವ ದರ್ಶನ್ ಎರಡು ಸಾಂಗ್ ಶೂಟಿಂಗ್ ಮುಗಿದ ನಂತರವಷ್ಟೇ ಮತ್ತೆ ತಾಯ್ನಾಡಿಗೆ ಹಿಂತಿರುಗಲಿದ್ದಾರೆ.

ಒಡೆಯ ತೆಲುಗಿನ ವೀರಂ ಚಿತ್ರದ ರಿಮೇಕ್ ಸಿನಿಮಾ. ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡಿರುವ ನಿರ್ದೇಶಕ ಎಂ.ಡಿ. ಶ್ರೀಧರ್ ಒಡೆಯನಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.











































