ಡ್ಯಾನ್ಸ್ ವರ್ಲ್ಡ್ ಕಪ್ ನಲ್ಲಿ ವಿಜೇತೆಯಾದ ಕನ್ನಡ ಕಿರುತೆರೆ ನಟಿ!

Picture of Cinibuzz

Cinibuzz

Bureau Report

ಡ್ಯಾನ್ಸ್ ವರ್ಲ್ಡ್ ಕಪ್ ನಲ್ಲಿ ಕನ್ನಡ ಕಿರುತೆರೆ ನಟಿ ನಿಶಾ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಯೆಸ್… ಪೋರ್ಚುಗಲ್ ನ ಬಾಗ್ರಾದಲ್ಲಿ ನಡೆದ ಡ್ಯಾನ್ಸ್ ವರ್ಲ್ಡ್ ಕಪ್ ಸ್ಪರ್ಧೆಯಲ್ಲಿ ನಿಶಾ ಭಾಗವಹಿಸಿ ಗೆಲುವಿನ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕನ್ನಡ ಕಿರುತೆರೆಯ ಶ್ರೀ ವಿಷ್ಣು ದಶಾವತಾರ ಪೌರಾಣಿಕ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದ ನಿಶಾ ಡ್ಯಾನ್ಸ್ ವರ್ಲ್ಡ್ ಕಪ್ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿ ಜನಮನ ಗೆದ್ದಿದ್ದಾರೆ.

ಮೂಲತಃ ನಿಶಾ ಅವರು ಶಾಸ್ತ್ರೀಯ ನೃತ್ಯಪಟುವಾಗಿದ್ದು ತಮ್ಮ ಡ್ಯಾನ್ಸ್ ಪಾರ್ಟನರ್ ಅನಿರುದ್ಧ್ ಕೋ ಪಾರ್ಟನರ್ ವರ್ಲ್ಡ್ ಕಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಭಾರತವನ್ನ ಪ್ರತಿನಿಧಿಸಿದ್ದರು. ಜಾನಪದ ಡುಯೇಟ್ ರಾಷ್ಟ್ರೀಯ ವಿಭಾದಲ್ಲಿ ಈ ಜೋಡಿ ಚಿನ್ನದ ಪದಕ ಗೆದ್ದಿದ್ದಾರೆ. ಅಂತಾರಾಷ್ಟ್ರೀಯ ಡ್ಯಾನ್ಸ್ ಸ್ಪರ್ಧೆಯಲ್ಲಿ ಸುಮಾರು 51ಕ್ಕೂ ಹೆಚ್ಚು ದೇಶದ ನೃತ್ಯ ಪಟುಗಳು ಭಾಗಿಯಾಗಿದ್ದರು. ಒಟ್ಟು 13 ವಿವಿಧ ವಿಭಾಗಗಳಲ್ಲಿ ಈ ಸ್ಪರ್ಧೆ ನಡೆದಿತ್ತು. ಆಡಿಷನ್ ಗಾಗಿಯೇ ಸುಮಾರು 20 ಸಾವಿರ ಮಂದಿ ಹಾಜರಾಗಿದ್ದರು.

ಇನ್ನಷ್ಟು ಓದಿರಿ

Scroll to Top