ರಂಗಿತರಂಗ 2 ಮಾಡಲು ಅನೂಪ್ ಭಂಡಾರಿ ಪ್ಲ್ಯಾನ್!

Picture of Cinibuzz

Cinibuzz

Bureau Report

ಭಾರತದಾದ್ಯಂತ ಬಾಹುಬಲಿ ಹೈಪ್ ಕ್ರಿಯೇಟ್ ಆಗಿದ್ದ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದ ಕನ್ನಡದ ಸಿನಿಮಾ ರಂಗತರಂಗ. ವಿಭಿನ್ನವಾದ ಕಥಾಹಂದರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಹೊಸಬರ ತಂಡ ಪರಭಾಷೆಯ ಬಾಹುಬಲಿ ಚಿತ್ರಕ್ಕೂ ಸೆಡ್ಡು ಹೊಡೆದು ದೇಶ ವಿದೇಶಗಳಲ್ಲೂ ಕನ್ನಡದ ಕಂಪನ್ನು ಬೀರುವಲ್ಲಿ ಸಕ್ಸಸ್ ಕೂಡ ಆಗಿತ್ತು.

ರಂಗತರಂಗ ಚಿತ್ರದ ಸಕ್ಸಸ್ ನ ನಂತರ ಎರಡನೇ ಸೀಕ್ವೆಲ್ ಕೂಡ ಬರಲಿದೆ ಎಂಬ ಗುಲ್ಲು ನಾಲ್ಕು ವರ್ಷದ ಮುಂಚೆಯೇ ಎದ್ದಿತ್ತು. ಆದರೆ ಅಧಿಕೃತವಾದ ಮಾಹಿತಿ ಹೊರಬರದೇ ಆ ವಿಚಾರವೂ  ಗಾಳಿಸುದ್ದಿಯಾಗಿಯೇ ತಣ್ಣಗಾಗಿತ್ತು. ಆದರೆ ನಾಲ್ಕು ವರ್ಷದ ನಂತರ ನಿರ್ದೇಶಕ ಅನೂಪ್ ಭಮಡಾರಿ ರಂಗತರಂಗಿ 2 ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಂಗತಂಗ ಚಿತ್ರದಲ್ಲಿ ನಟಿಸಿದ್ದ ಬಹುತೇಕರೇ ರಂಗತಂಗ 2ನಲ್ಲಿಯೂ ಮುಂದುವರೆಯಲಿದ್ದಾರಂತೆ. ಈಗಾಗಲೇ ಹೆಚ್.ಕೆ. ಪ್ರಕಾಶ್ ಜತೆ ಒಂದು ಸುತ್ತಿನ ಮಾತುಕತೆಯನ್ನು ಅನೂಪ್ ಭಂಡಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.  ಸದ್ಯ ಬಿಲ್ಲ ರಂಗ ಭಾಷ ಚಿತ್ರದಲ್ಲಿ ಅನೂಪ್ ಭಂಡಾರಿ ಬ್ಯುಸಿಯಾಗಿದ್ದು, ಈ ಚಿತ್ರದ ಬಳಿಕ ರಂಗಿತರಂಗಿ 2 ಸಿನಿಮಾ ಶುರುವಾಗುವ ಸಾಧ್ಯತೆ ಇದೆ.

ಇನ್ನಷ್ಟು ಓದಿರಿ

Scroll to Top