ಸದ್ದು ಮಾಡುತ್ತಿದೆ ಮಿಷನ್ ಮಂಗಲ್ ಪೋಸ್ಟರ್!

Picture of Cinibuzz

Cinibuzz

Bureau Report

ಅಕ್ಷಯ್ ಕುಮಾರ್ ನಾಯಕತ್ವದ ಬಾಲಿವುಡ್ ನ ಬಹುನಿರೀಕ್ಷಿತ ಸಿನಿಮಾ ಮಿಷನ್ ಮಂಗಲ್ ತನ್ನ ಪೋಸ್ಟರ್ ರಿಲೀಸ್ ಮಾಡಿಕೊಂಡಿದೆ. ಭಾರತದ ಮಂಗಳಯಾನದ ನೈಜ ಘಟನೆಯೊಂದನ್ನು ಆಧರಿಸಿದ ಮಿಷನ್ ಮಂಗಲ್ ಸಿನಿಮಾ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಿಡುಗಡೆಯಾಗಲಿದೆ ಎಂದು ಸ್ವತಃ ಅಕ್ಷಯ್ ಕುಮಾರ್ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನು ರಿಲೀಸ್ ಆಗಿರುವ ಫೋಸ್ಟರ್ ನಲ್ಲಿ ಬಹುತೇಕ ಕಲಾವಿದರ ಫೋಟೋಗಳಿದ್ದು, ಮಂಗಳ ಗ್ರಹದ ಕಕ್ಷೆಯ ಸುತ್ತ ಗ್ರಹಗಳು ಸುತ್ತುತ್ತಿರುವಂತೆ ಕಾಣುತ್ತಿದೆ. ಇನ್ನು ಭೂಮಿಯಿಂದ ಉಡಾವಣೆಯಾಗುತ್ತಿರುವ ರಾಕೆಟ್ ಅಕ್ಷಯ್ ಕುಮಾರ್ ಮತ್ತು ಸಹ ಕಲಾವಿದರನ್ನು ಸೆಪರೇಟ್ ಮಾಡುತ್ತಿರುವಂತೆಯೂ ಕಾಣಿಸುತ್ತಿದೆ. ಮಿಷನ್ ಮಂಡಲ್ ಸಿನಿಮಾವನ್ನು ಎಸ್. ಶಂಕರ್ ನಿರ್ದೇಶನ ಮಾಡಿದ್ದು, ಆರ್ ಬರ್ಕಿ ನಿರ್ಮಾಣ ಮಾಡಿದ್ದಾರೆ.

 

ಇನ್ನಷ್ಟು ಓದಿರಿ

Scroll to Top