ಬಾಟಲ್ ಕ್ಯಾಪ್ ಚಾಲೆಂಜ್ ಗೆ ಪ್ರಥಮ್ ಗರಂ!

Picture of Cinibuzz

Cinibuzz

Bureau Report

ಭಾರತದಾದ್ಯಂತ ಸದ್ಯ ಬಿಸಿ ಬಿಸಿ ಚರ್ಚೆಯಲ್ಲಿರುವ ವಿಚಾರ ಬಾಟಲ್ ಕ್ಯಾಪ್ ಚಾಲೆಂಜ್. ಯೆಸ್.. ತಾವೆಷ್ಟು ಫಿಟ್ ಆಗಿದ್ದೇವೆ ಎಂಬುದನ್ನು ತೋರಿಸುವ ಸಲುವಾಗಿ ಲೂಸ್ ಮಾಡಿದ ಬಾಟಲ್ ನನ್ನು ಕಾಲಿನಿಂದ ಕಿಕ್ ಮಾಡಿ ಕೆಳಗೆ ಬೀಳಿಸುವ ಚಾಲೆಂಜೊಂದರನ್ನು ಬಾಲಿವುಡ್ ನ ಸೆಲೆಬ್ರೆಟಿಗಳು ಅಕ್ಸೆಪ್ಟ್ ಮಾಡಿ, ಚಾಲೆಂಜ್ ಮುಗಿಸಿ ಅದನ್ನು ವಿಡಿಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಖಾತೆಗಳಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಮತ್ತೊಬ್ಬರಿಗೆ ಸವಾಲು ನೀಡುತ್ತಿದ್ದಾರೆ. ಈಗಾಗಲೇ ಬಹಳಷ್ಟು ಮಂದಿ ಈ ಚಾಲೆಂಜ್ ಅಕ್ಸೆಪ್ಟ್ ಮಾಡಿದ್ದು, ಇಂತಹುದೇ ಸಾಕಷ್ಟು ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದೆ.

Actually this one is perfect #opencapchallenge ನನ್ನ ಮಾತು ಕೇಳಿ.ಇದನ್ನ ಜೀವನದಲ್ಲಿ practice ಮಾಡಿ.ಉದ್ಧಾರ ಆಗೆ ಆಗ್ತೀರ… ನಾನ್ ಹೇಳೊದು ನಿಮ್ಮ ಒಳ್ಳೇದಕ್ಕೆ! #Isupportyoga not ಕೆಲಸಕ್ಕೆ ಬಾರದ #ತುಕಾಲಿಚಾಲೆಂಜ್ಇಂತ challenge ಹುಟ್ಟಿಹಾಕೋ ಹಿಂದಿ stars ಗೆ ಮೊದ್ಲು ತಲೆಮೇಲೆ ಹೊಡಿಬೇಕು!!!

Gepostet von Olle Hudga Pratham am Freitag, 5. Juli 2019

ಅಂದಹಾಗೆ ಈ ಚಾಲೆಂಜ್ ಚಂದನವನಕ್ಕೂ ಕಾಲಿಟ್ಟಿದ್ದು, ಪುನೀತ್ ರಾಜ್ ಕುಮಾರ್, ಗಣೇಶ್, ರಚಿತಾ ರಾಮ್, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಸೇರಿದಂತೆ ಬಹುತೇಕ ಕನ್ನಡ ನಟ ನಟಿಯರು ಈ ಚಾಲೆಂಜ್ ಅಕ್ಸೆಪ್ಟ್ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಈ ಮಧ್ಯೆ ಈ ಚಾಲೆಂಜನ್ನು ಅಲ್ಲ ಗಳೆದಿರುವ ಬಿಗ್ ಬಾಸ್ ಸೀಜನ್ ನಾಲ್ಕರ ವಿನ್ನರ್ ಫುಲ್ ಗರಂ ಕೂಡ ಆಗಿದ್ದಾರೆ. ಅಲ್ಲದೇ ಒಳ್ಳೆ ಹುಡ್ಗ ಪ್ರಥಮ್ ಈ ಚಾಲೆಂಜನ್ನು ಯಾರೂ ಮಾಡಬಾರದೆಂದು ರಿಕ್ವೆಸ್ಟ್ ಮಾಡಿದ್ದಾರೆ. ಅಲ್ಲದೇ ತಾವೇ ಸ್ವತಃ ವಿಡಿಯೋವೊಂದನ್ನು ಮಾಡುವ ಮೂಲಕ ಇಂತಹ ಚಾಲೆಂಜ್ ಗಳು ಮನುಷ್ಯನಿಗೆ ಅಪಾಯಗಳನ್ನು ತಂದು ಒಡ್ಡಬಹುದು. ಚಾಲೆಂಜ್ ಮಾಡುವ ಬದಲು ಯೋಗ ಮಾಡಿ ರೋಗ ಹೋಗುತ್ತದೆ ಎಂದು ಬುದ್ದಿವಾದವನ್ನು ಹೇಳಿದ್ದಾರೆ.

ಇನ್ನಷ್ಟು ಓದಿರಿ

Scroll to Top