ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಸಿನಿಮಾ ಮೂಲಕ ಮೂಲೆ ಹಿಡಿದಿದ್ದ ಡಬಲ್ ಮೀನಿಂಗ್ ಡೈಲಾಂಗ್ ಗಳ ಟ್ರೆಂಡ್ ಶುರುವಾಗುವಂತೆ ಮಾಡಿದವರು ಸಿಂಪಲ್ ಸುನಿ. ಬರೀ ಡಬಲ್ ಮೀನಿಂಗ್ ನಿಂದಲೇ ಸಿನಿಮಾ ಸಾಗಿಸುತ್ತಾರೆ ಎಂಬ ಅಪವಾದವನ್ನು ಹೊರದ ಸುನಿ ಧನ್ವಿರ್ ಎಂಬ ಯುವ ನಟನ ಮೂಲಕ ಬಜಾರ್ ಅನ್ನೋ ಕ್ರೈಮ್ ಅಂಡ್ ಕಮರ್ಷಿಯಲ್ ಸಿನಿಮಾವನ್ನು ಮಾಡಿ ನಾನು ಡಬಲ್ ಮೀನಿಂಗ್ ಹೊರತಾಗಿಯೂ ಸಿನಿಮಾ ಮಾಡಬಲ್ಲೆ ಎಂದು ಸಾಬೀತುಪಡಿಸಿ ತೋರಿಸಿದ್ದರು. ಸದ್ಯ ಶರಣ್ ನಾಯಕತ್ವದ ಅವತಾರ ಪುರುಷ ಸಿನಿಮಾದ ಬ್ಯುಸಿಯಲ್ಲಿರುವ ಸುನಿ ಪ್ರತಿಭಾವಂತರಿಗೆ ಸಿಂಪಲ್ ಇನ್ವಿಟೇಷನ್ನೊಂದನ್ನು ನೀಡಿದ್ದಾರೆ.
ಕಾಮಿಡಿ ಪಂಚಿಂಗ್…
ಮಾಸ್ ಡೈಲಾಗ್ಸ್…
ಡಬ್ಬಲ್ ಮೀನಿಂಗ್…
ವಾಟ್ಸಪ್ ಫಾರ್ವಡ್..
ಪೋಲಿ ಡೈಲಾಗ್ಸ್ ಇವನ್ನೆಲ್ಲಾ ಬಿಟ್ಟು..
"ಕಥೆ ಮತ್ತು ವಸ್ತುಸ್ಥಿತಿ"ಯನ್ನು ಅರ್ಥ ಮಾಡಿಕೊಂಡು ಬರೆಯುವಂತ ಬರಹಗಾರರು ಬೇಕಾಗಿದ್ದಾರೆ…. ಆಸಕ್ತಿದಾರರು ಸಂಪರ್ಕಿಸಿ..ನಿಮ್ಮ ನಮ್ಮ ಭೇಟಿಗೆ ಹತ್ತಿರವಾಣಿ ಸಂಖ್ಯೆ
8431210270— Su Ni (@SimpleSuni) July 6, 2019
ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳಬೇಕೆಂಬ ಹಂಬಲ, ತುಡಿತವಿರುವ ಎಲಿಜಿಬಲ್ ಬರಹಗಾರರಿಗೆ ಸುನಿ ಆಫರ್ ಒಂದನ್ನು ನೀಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಫೋಸ್ಟ್ ಒಂದನ್ನು ಮಾಡಿರುವ ಸುನಿ ಕಾಮಿಡಿ ಪಂಚಿಂಗ್… ಮಾಸ್ ಡೈಲಾಗ್ಸ್… ಡಬ್ಬಲ್ ಮೀನಿಂಗ್… ವಾಟ್ಸಪ್ ಫಾರ್ವಡ್.. ಪೋಲಿ ಡೈಲಾಗ್ಸ್ ಇವನ್ನೆಲ್ಲಾ ಬಿಟ್ಟು.. ಕಥೆ ಮತ್ತು ವಸ್ತು ಸ್ಥಿತಿಯನ್ನು ಅರ್ಥ ಮಾಡಿಕೊಂಡು ಬರೆಯುವಂತಹ ಬರಹಗಾರರು ಬೇಕು ಎಂದು ಪ್ರಕಟಣೆ ಹೊರಡಿಸಿದ್ದಾರೆ. ಆಸಕ್ತರು ಅವರ ಟ್ವಿಟರ್ ಖಾತೆಯ ಮೇಲೊಮ್ಮೆ ಕಣ್ಣಾಡಿಸಬಹುದು.











































