ದುಬಾರಿ ವ್ಯಾನಿಟಿ ವ್ಯಾನ್ ಖರೀದಿಸಿದ ಅಲ್ಲು ಅರ್ಜುನ್!

Picture of Cinibuzz

Cinibuzz

Bureau Report

ಸೆಲೆಬ್ರೆಟಿಗಳು ಅಂದಮೇಲೆ ಒಂದಿಲ್ಲೊಂದು ಸ್ಥಳಕ್ಕೆ ಇಮಿಡಿಯೇಟ್ ಆಗಿ ಹೋಗುವುದು ಬರುವುದು ಎಲ್ಲವೂ ಕಾಮನ್ನು. ಮಾರ್ಗ ಮಧ್ಯೆ ಗಾಡಿ ಕೈ ಕೊಟ್ಟರಂತೂ ಅವರ ಪಜೀತಿ ಹೇಳುವ ಹಾಗಿಲ್ಲ. ಬಿಡುವ ಹಾಗಿಲ್ಲ. ಒಟ್ಟಿನಲ್ಲಿ ಸದಾ ಒತ್ತಡದಲ್ಲಿಯೇ ಜೀವನವನ್ನು ಸಾಗಿಸುತ್ತಲೇ ಇರುತ್ತಾರೆ.

ಅಂದಹಾಗೆ ಸ್ಟಾರ್ ಸೆಲೆಬ್ರೆಟಿಗಳಿಗೆ ನಿರ್ಮಾಪಕರು ಸೆಟ್ ನಲ್ಲಿಯೇ ಸ್ಪೆಷಲ್ ಆಗಿರುವಂತಹ ಕ್ಯಾರವಾನ್ ಗಳನ್ನು ನೀಡಿರುತ್ತಾರೆ. ಚಿತ್ರೀಕರಣವಿಲ್ಲದ ಸಮಯದಲ್ಲಿ ಸೆಲೆಬ್ರೆಟಿಗಳು ಕ್ಯಾರವಾನ್ ಗೆ ತೆರಳಿ ರೆಸ್ಟ್ ಮಾಡಬಹುದಾಗಿರುತ್ತದೆ. ಬಹಳ಼ಷ್ಟು ಸೆಲೆಬ್ರೆಟಿಗಳು ಯಾವ ನಿರ್ಮಾಪಕರ ಮೇಲೂ ಡಿಪೆಂಡ್ ಆಗದೇ ತಮ್ಮದೇ ಸ್ವಂತ ಕ್ಯಾರವಾನ್ ಗಳನ್ನು ಹೊಂದಿರುತ್ತಾರೆ. ಅದನ್ನು ತಮಗಿಷ್ಟಬಂದಂತೆ ಬದಲಿಸುವ ಸಲುವಾಗಿ ಕೋಟಿ ಕೋಟಿ ಹಣವನ್ನು ಇನ್ವೆಸ್ಟ್ ಕೂಡ ಮಾಡಿರುತ್ತಾರೆ.

ಸದ್ಯ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಇತ್ತೀಚಿಗೆ ಐಷಾರಾಮಿ ವ್ಯಾನಿಟಿ ವ್ಯಾನೊಂದನ್ನು ಖರೀದಿಸಿದ್ದಾರೆ. ಇದನ್ನು ವಿಶೇಷವಾಗಿ ವಿನ್ಯಾಸ ಗೊಳಿಸಲಾಗಿದ್ದು, ಇದಕ್ಕೆ ಫಾಲ್ಕನ್ ಎಂದು ಹೆಸರಿಡಲಾಗಿದೆ. ಅಲ್ಲದೇ ಫಾಲ್ಕನ್ ಗೆ ಸಂಬಂಧಪಟ್ಟ ಫೋಟೋಗಳನ್ನು ಸ್ವತಃ ಅಲ್ಲು ಅರ್ಜುನ್ ಅವರೇ ಶೇರ್ ಮಾಡಿದ್ದಾರೆ. ರೆಡ್ಡಿ ಕಸ್ಟಮ್ ಎಂಬ ಕಂಪನಿ ಈ ಫಾಲ್ಕನನ್ನು ಡಿಸೈನ್ ಮಾಡಿದ್ದು, ಕಂಪನಿಗೆ ಬನ್ನಿ ಶುಭಾಶಯವನ್ನು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಈ ಪಾಲ್ಕನ್ ಬೆಲೆ ಅಂದಾಜು 7 ಕೋಟಿ ಎನ್ನಲಾಗುತ್ತಿದೆ. ಫಾಲ್ಕನ್ ನಲ್ಲಿ ವಿಶ್ರಾಂತಿ, ಊಟ, ಮೇಕಪ್ ಇತ್ಯಾದಿ ಸೌಲಭ್ಯಗಳಿವೆ.

ಇನ್ನಷ್ಟು ಓದಿರಿ

Scroll to Top