ರಾಕುಲ್ ವಿರುದ್ಧ ಅಭಿಮಾನಿಗಳು ಆಕ್ರೋಶ!

Picture of Cinibuzz

Cinibuzz

Bureau Report

ಬಹುಭಾಷಾ ತಾರೆ ರಾಕುಲ್ ಪ್ರೀತ್ ಸಿಂಗ್ ವಿರುದ್ಧ ಅಭಿಮಾನಿಗಳು ಮತ್ತು ಟ್ರೋಲಿಗರು ಸಿಟ್ಟಿಗೆದ್ದಿದ್ದಾರೆ. ಮುಂಬೈನ ರೆಸ್ಟೊರೆಂಟ್ ಒಂದರಿಂದ ಹೊರ ಬಂದ ರಾಕುಲ್ ತಮ್ಮ ಕಾರಿನ ಬಳಿ ಹೊರಟಿದ್ದರು. ಇದೇ ವೇಳೆ ಸಡನ್ನಾಗಿ ಬಂದ ಕೊಳಗೇರಿಯ ಬಡ ಮಕ್ಕಳು ಹಣಕ್ಕಾಗಿ ರಾಕುಲ್ ಅವರನ್ನು ಸುತ್ತುವರೆದಿದ್ದಾರೆ.

https://www.instagram.com/p/Bzh5gNXHxve/?utm_source=ig_web_copy_link

ಆ ಮಕ್ಕಳ ಅತಿಯಾದ ವರ್ತನೆಯಿಂದ ಇರಿಟೇಟ್ ಆಗಿ ರಾಕುಲ್ ಶೀಘ್ರವಾಗಿಯೇ ಕಾರು ಏರಲು ಪ್ರಯತ್ನಿಸಿದರು. ಆದರೆ ಆ ಮಕ್ಕಳು ಹೊರಡಲು ಬಿಡದ ಕಾರಣ ಕಾರಿನ ಚಾಲಕ ಬಂದು ಮಕ್ಕಳನ್ನು ದೂರ ಸರಿಸಿ ಕಾರು ಹತ್ತಲು ಅವಕಾಶ ಮಾಡಿಸಿಕೊಟ್ಟರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಮಕ್ಕಳು ಆ ಮಟ್ಟಿಗೆ ಬೇಡಿಕೊಂಡರೂ ಹಣ ನೀಡದ ರಾಕುಲ್ ವಿರುದ್ಧ ನೆಟ್ಟಿಗರು ಹರಿಹಾಯ್ದಿದ್ದಾರೆ.

ಇನ್ನಷ್ಟು ಓದಿರಿ

Scroll to Top