ಆರ್ ಆರ್ ಆರ್ ಚಿತ್ರದ ನಕಲಿ ಪೋಸ್ಟರ್ ರಿಲೀಸ್!

Picture of Cinibuzz

Cinibuzz

Bureau Report

ರಾಮ್ ಚರಣ್ ತೇಜ್ ಮತ್ತು ಜೂನಿಯರ್ ಎನ್ ಟಿ ಆರ್ ಕಾಂಬಿನೇಷನ್ನಿನ ಆರ್ ಆರ್ ಆರ್ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ.

ಬಾಹುಬಲಿ ಚಿತ್ರದ ಯಶಸ್ಸಿನ ನಂತರ ಎಸ್.ಎಸ್. ರಾಜಮೌಳಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಜೂನಿಯರ್ ಎನ್ ಟಿ ಆರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಪೋಸ್ಟರನ್ನು ರಿಲೀಸ್ ಮಾಡಲಾಗಿದ್ದು, ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಪೋಸ್ಟರನ್ನು ಅಧಿಕೃತವಾಗಿ ಚಿತ್ರತಂಡವೇನೂ ಬಿಡುಗಡೆ ಮಾಡಲಾಗಿಲ್ಲದಿದ್ದರೂ ಸಹ ಜೂನಿಯರ್ ಎನ್ ಟಿ ಆರ್ ಅವರ ಅಭಿಮಾನಿಗಳು ಕ್ರಿಯೇಟ್ ಮಾಡಿ ಹರಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಚಿತ್ರತಂಡದ ಖಾತೆಗಳಿಂದ ಈ ಫಸ್ಟ್ ರಿಲೀಸ್ ಆದರೆ ಮಾತ್ರ ಇದು ಅಸಲಿ ಎಂದು ತಿಳಿಯಲಿದೆ. ಆರ್ ಆರ್ ಆರ್ ಸಿನಿಮಾವನ್ನು 2020ರ ಜುಲೈ 30ರಂದು ಬಿಡುಗಡೆಗೊಳಿಸಲು ಪ್ಲ್ಯಾನ್ ಮಾಡಿಕೊಂಡಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ.

 

ಇನ್ನಷ್ಟು ಓದಿರಿ

Scroll to Top