ಸಿಂಗನಿಗೂ ತಟ್ಟಿದ ಪೈರಸಿ ಭೂತ!

Picture of Cinibuzz

Cinibuzz

Bureau Report

ಸ್ಟಾರ್ ಸಿನಿಮಾಗಳ ರಿಲೀಸ್ ಗೂ ಹಿಂದೆ ಮುಂದೆ ತಡೆ ತಡೆದು ಚಿತ್ರಗಳನ್ನು ರಿಲೀಸ್ ಮಾಡಿಕೊಳ್ಳುವ ಬಹುತೇಕ ನಿರೀಕ್ಷಿತ ಸಿನಿಮಾಗಳಿಗೆ ಮಹಾನ್ ಹೊಡೆತವೆಂದರೆ ಲೀಕಾಸುರರ ಹಾವಳಿ. ಹೌದು.. ಬಿಡುಗಡೆ ದಿನಾಂಕವನ್ನು ಘೋಷಿಸಿ ರಿಲೀಸ್ ಆಗುವ ಸಿನಿಮಾಗಳ ಗಳಿಕೆಗೆ ಹೊಡೆತವನ್ನು ಕೊಡುವುದಕ್ಕಾಗಿ ಪೈರಸಿಗಳಾಗಿ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ತಮಾಷೆ ನೋಡುತ್ತಾರೆ.

ಸದ್ಯ ಇಂತಹ ಪೈರಸಿ ಭೂತಕ್ಕೆ ಇತ್ತೀಚಿಗೆ ತೆರೆಕಂಡ ಸಿಂಗ ಚಿತ್ರವೂ ಬಲಿಯಾಗಿದೆ. ಸಿಂಗ ಸಿನಿಮಾದ 720K ಕ್ವಾಲಿಟಿಯ ವಿಡಿಯೋವನ್ನು ತಮಿಳು ಎಂ ವಿ ವೆಬ್ ಸೈಟ್ ನಲ್ಲಿ ಲೀಕ್ ಮಾಡಲಾಗಿದೆ. ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುವ ಸಂದರ್ಭದಲ್ಲಿ ಇಂತಹ ವಿಕೃತಿ ಮೆರೆಯುವುದು ಎಷ್ಟರಮಟ್ಟಿಗೆ ಸರಿ. ಈ ಕೂಡಲೇ ಚಿತ್ರತಂಡವೂ ಇಂತಹ ಹಾವಳಿಕೋರರ ವಿರುದ್ಧ ಧ್ವನಿಯೆತ್ತಿ ಕಾನೂನು ಕ್ರಮವನ್ನು ಜರುಗಿಸದಿದ್ದರೆ ನಿರ್ಮಾಪಕರಿಗೆ ಹೊಡೆತ ಬೀಳಲಿದೆ.

ಇನ್ನಷ್ಟು ಓದಿರಿ

Scroll to Top