ಸೈನಾ ನೆಹ್ವಾಲ್ ಬಯೋಪಿಕ್ ಗೆ ಬ್ಯಾಟು ಹಿಡಿದು ಪ್ರಾಕ್ಟೀಸ್ ಮಾಡುತ್ತಿದ್ದ ಶ್ರದ್ಧಾ ಕಪೂರ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಶ್ರದ್ಧಾ ಅವರನ್ನು ಟೆಸ್ಟ್ ಮಾಡಿದ್ದ ವೈದ್ಯರು ಡೆಂಗ್ಯೂ ಹರಡಿರುವುದಾಗಿಯೂ ರಿಪೋರ್ಟ್ ಕೊಟ್ಟಿದ್ದಾರೆ. ಸಿನಿಮಾ ಸೆಟ್ ನಲ್ಲಿ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು.

ಆ ನಂತರ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡಿದ್ದ ಶ್ರದ್ಧಾ ಕಪೂರ್ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ಶೀಘ್ರದಲ್ಲಿ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಸೈನಾ ಜೀವನ ಕುರಿತು ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ನಟಿಸುತ್ತಿರುವ ಶ್ರದ್ಧಾ ಇದಕ್ಕಾಗಿ ಬ್ಯಾಡ್ಮಿಂಟನ್ ತರಬೇತಿ ಕೂಡ ಪಡೆದಿದ್ದರು. ಅವರ ಚಿತ್ರದ ಪೋಸ್ಟರ್ ಅನ್ನು ಕಳೆದ ವಾರ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೂಡ ಹಂಚಿಕೊಂಡಿದ್ದರು.











































