ಜಯಮ್ಮನ ಮಗ ಬಿಗ್ ಹಿಟ್ ನ ನಂತರ ಮಾಯವಾಗಿದ್ದ ವಿಕಾಸ್ ಕಾಣದಂತೆ ಮಾಯವಾದನು ಚಿತ್ರದ ಮೂಲಕ ಮತ್ತೆ ಕಾಣಿಸಿಕೊಂಡಿದ್ದಾರೆ. ನಿರ್ದೇಶಕನಾಗಿ ಮಿಂಚು ಹರಿಸಿದ್ದ ಅವರು ಸದ್ಯ ಕಾಣದಂತೆ ಮಾಯವಾದನು ಚಿತ್ರದ ಮೂಲಕ ನಾಯಕನಾಗಿಯೂ ಕಮಾಲು ಮಾಡಲು ರೆಡಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಹೈಪ್ ಕ್ರಿಯೇಟ್ ಮಾಡಿರುವ ಈ ಸಿನಿಮಾ ರಿಲೀಸ್ ಗೆ ಹತ್ತಿರವಾಗುತ್ತಿದ್ದಂತೆ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಈಗಾಗಲೇ ಚಿತ್ರದ ಟ್ರೇಲರ್ ನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿಕೊಂಡಿರುವ ಚಿತ್ರತಂಡ ಸಿನಿ ರಸಿಕರಿಗೆ ಆಫರ್ ಒಂದನ್ನು ನೀಡಿದೆ.
Win ₹ 50000 in cash. Share it and Help a creative talent get noticed.NOTE: Taglines submitted on Facebook will be…
Gepostet von Kaanadante Maayavadanu am Samstag, 20. Juli 2019
ಕಾಣದಂತೆ ಮಾಯವಾದನು ಟ್ಯಾಗ್ ಲೈನ್ ಕಾಂಟೆಸ್ಟ್ ಒಂದನ್ನು ಆಯೋಜಿಸಿದೆ. ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಆಗಿರುವ ಕಾಣದಂತೆ ಮಾಯವಾದನು ಟ್ರೇಲರನ್ನು ಮತ್ತೊಮ್ಮೆ ನೋಡಿ ಅದಕ್ಕೆ ಸೂಟ್ ಆಗುವ ಟ್ಯಾಗ್ ಲೈನ್ ನ್ನು ಕಾಮೆಂಟ್ ಸೆಕ್ಷನ್ ನಲ್ಲಿ ನೀಡಬೇಕು. ಅಲ್ಲದೇ ಟ್ಯಾಗ್ ಲೈನ್ ಜತೆಗೆ ಮೇಲ್ ಐಡಿ ಹಾಗೂ ಕಾಟ್ಯಾಂಕ್ಟ್ ನಂಬರ್ ಕೂಡ ನಮೂದಿಸಬೇಕಿದೆ. ಒಂದು ಕಾಮೆಂಟ್ ನಲ್ಲಿ ಒಂದೇ ಟ್ಯಾಗ್ ಲೈನ್ ಗೆ ಅವಕಾಶವಿದ್ದು, ಎಷ್ಟಾದರೂ ಶೀರ್ಷಿಕೆಗಳನ್ನು ಪ್ರತ್ಯೇಕವಾಗಿ ನಮೂದಿಸಬಹುದಾಗಿದೆ. ಅತ್ಯುತ್ತಮ ಉಪ ಶೀರ್ಷಿಕೆಗೆ 50 ಸಾವಿರ ನಗದು ಬಹುಮಾನವನ್ನು ಘೋಷಣೆಯನ್ನು ಮಾಡಿದ್ದು, ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಬಹುಮಾನ ವಿತರಣೆಯನ್ನು ಮಾಡಲಾಗುತ್ತದೆ ಎಂದು ಕಾಣದಂತೆ ಮಾಯವಾದನು ಚಿತ್ರತಂಡ ತನ್ನ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ತಿಳಿಸಿದೆ. ಟ್ಯಾಗ್ ಲೈನ್ ಕೊಟ್ಟು ಬಹುಮಾನ ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಿ…











































