ಲೂಸಿಯಾ ಪವನ್ ಬಾಲಿವುಡ್ ಪ್ರವೇಶ!

Picture of Cinibuzz

Cinibuzz

Bureau Report

ಲೈಫು ಇಷ್ಟೇನೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಯುವ ನಿರ್ದೇಶಕ ಪವನ್. ನಂತರ ಲೂಸಿಯ, ಯೂಟರ್ನ್ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿದ್ದ ಪವನ್ ಕುಮಾರ್ ಸದ್ಯ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ. ಕನ್ನಡದ ಯೂಟರ್ನ್ ಸಿನಿಮಾವನ್ನು ತಮಿಳು ಮತ್ತು ತೆಲುಗಿಗೆ ರಿಮೇಕ್ ಮಾಡಿದ್ದ ಪವನ್ ಕುಮಾರ್ ಶ್ರದ್ಧಾ ಶ್ರೀನಾಥ್ ಪಾತ್ರವನ್ನು ಸಮಂತಾ ಅಕ್ಕಿನೇನಿಯವರಿಂದ ಮಾಡಿಸಿ ಸೈ ಎನಿಸಿಕೊಂಡಿದ್ದರು.

ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಪವನ್ ಕುಮಾರ್ ಹಿಂದಿ ನಿರ್ಮಾಣ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದು, ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ ನಲ್ಲಿ ಈ ಕುರಿತು ಅಧಿಕೃತ ಮಾಹಿತಿಯೂ ಹೊರಬೀಳಲಿದೆ. ಇನ್ನು ನಿರ್ದೇಶಕರು C10H14N2 ಎಂಬ ಹೆಸರಿನ ನಿಕೋಟಿನ್ ನ ರಾಸಾಯನಿಕ ಸೂತ್ರದ ಮೇಲೆ ಚಿತ್ರ ಮಾಡಲು ಬಯಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಹಿಂದಿ ಭಾಷೆಯ ಜತೆಗೆ ಮತ್ತೆ ಬೇರೆ ಯಾವ ಯಾವ ಭಾಷೆಗಳಲ್ಲಿ ತಯಾರಿಸಲಾಗುತ್ತದೆ ಎಂಬುದನ್ನು ಪ್ರೊಡಕ್ಷನ್ ಹೌಸ್ ರಿವೀಲ್ ಮಾಡಲಿದೆ.

ಇನ್ನಷ್ಟು ಓದಿರಿ

Scroll to Top