ಯುವರತ್ನ ಟೀಮಿಗೆ ಸೋನು ಗೌಡ!

Picture of Cinibuzz

Cinibuzz

Bureau Report

ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದ ನಟಿ ಸೋನು ಗೌಡ. ನಂತರ ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದ ಅವರು ಭರವಸೆಯ ನಾಯಕಿ ಕೂಡ. ಸದ್ಯ ಅವರ ನಟನೆಯ ಐ ಲವ್ ಯು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಸೋನು ಗೌಡ ಯುವರತ್ನ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತದೆ. ಅವರ ಪಾತ್ರದ ಕುರಿತು ಯಾವುದೇ ಮಾಹಿತಿ ಹೊರಬಿದ್ದಿಲ್ಲವಾದರೂ ಸಹ ಜುಲೈ 26ರಿಂದ ಆರಂಭಗೊಳ್ಳಲಿರುವ ಮುಂದಿನ ಹಂತರ ಚಿತ್ರೀಕರಣದಲ್ಲಿ ಸೋನುಗೌಡ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಬರುಬರುತ್ತಾ ಯುವರತ್ನ ತಾರಾಬಳಗ ದಿನೇ ದಿನೇ ದೊಡ್ಡದಾಗುತ್ತ ಹೋಗುತ್ತಿದೆ. ಈ ಹಿಂದೆ ಪ್ರಕಾಶ್ ರೈ, ಡಾಲಿ ಧನಂಜಯ್, ವಸಿಷ್ಟ ಸಿಂಹ, ದಿಗಂತ್ ಸೇರಿದ್ದು, ಸದ್ಯ ಪಟ್ಟಿಗೆ ಸೋನುಗೌಡ ಕೂಡ ಸೇರ್ಪಡೆಯಾಗಲಿದ್ದಾರೆ. ರಾಜಕುಮಾರ ನಂತರ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ನಿನ ಎರಡನೇ ಸಿನಿಮಾ ಇದಾಗಿದ್ದು, ಸಂತೋಷ್ ಅನಂದ್ ರಾಮ್ ಅವರಿಗಿದು ಹ್ಯಾಟ್ರಿಕ್ ಚಿತ್ರ ಕೂಡ.

ಇನ್ನಷ್ಟು ಓದಿರಿ

Scroll to Top