ಪೈಲ್ವಾನ್ ಮುಂದಕ್ಕೆ!

Picture of Cinibuzz

Cinibuzz

Bureau Report

ಸ್ಯಾಂಡಲ್ ವುಡ್ ನಲ್ಲಿ ಬಹಳ ದಿನಗಳಿಂದಲೂ ಅಖಾಡ ಸಿದ್ಧಪಡಿಸಿಕೊಂಡು ಮ್ಯಾಚ್ ಗೆ ರೆಡಿಯಾಗಿರುವ ಪೈಲ್ವಾನ್ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಈ ಮೊದಲು ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿಯೂ ಅನೌನ್ಸ್ ಮಾಡಿದ್ದ ಚಿತ್ರತಂಡ ಆನಂತರ ಕಾರಣಾಂತರಗಳಿಂದಲೂ ಆಗಸ್ಟ್ 29ಕ್ಕೆ ಮುಂದಕ್ಕೆ ಹೋಗಿತ್ತು. ಇನ್ನೇನು ಸಿನಿಮಾ ರಿಲೀಸ್ ಆಗುತ್ತದೆ ಎಂಬ ಖುಷಿಯಲ್ಲಿದ್ದ ಕಿಚ್ಚನ ಅಭಿಮಾನಿಗಳಿಗೆ ಮತ್ತದೇ ನಿರಾಸೆ ಎದುರಾಗಿದೆ.

https://twitter.com/krisshdop/status/1153290828351098883

ಬಹು ಭಾಷೆಗಳಲ್ಲಿ ಬಿಡುಗಡೆಯಾಗಲು ಅಣಿಯಾಗಿರುವ ಪೈಲ್ವಾನ್ ಸೂಕ್ತ ತಯಾರಿ ಮಾಡಿಕೊಳ್ಳಲು ಮತ್ತಷ್ಟು ಸಮಯಾಕಾವಕಾಶವನ್ನು ಕೋರಿದ್ದು, ದಿನಾಂಕವನ್ನು ಸದ್ಯದಲ್ಲೇ ತಿಳಿಸುತ್ತೇವೆ ಎಂದು ನಿರ್ದೆಶಕ ಕೃಷ್ಣ ತಿಳಿಸಿದ್ದಾರೆ. ಅಲ್ಲದೇ ಜೂನ್ 22ರಂದು ಚಿತ್ರದುರ್ಗದಲ್ಲಿ ಆಡಿಯೋ ಬಿಡುಗಡೆಯಾಗಬೇಕಿದ್ದ ದಿನಾಂಕವೂ ಸಹ ಮುಂದಕ್ಕೆ ಹೋಗಿದ್ದು, ಸದ್ಯದಲ್ಲೇ ಅದನ್ನು ರಿವೀಲ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಕಿಚ್ಚ ಸುದೀಪ್ ಮತ್ತು ಆಕಾಂಕ್ಷ ಸಿಂಗ್ ಜತೆಯಾಗಿ ನಟಿಸಿರುವ ಪೈಲ್ವಾನ್ ಚಿತ್ರವನ್ನು ಹೆಬ್ಬುಲಿ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಅವರ ಹೆಂಡತಿ ಸ್ವಪ್ನ ಕೃಷ್ಣ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

 

ಇನ್ನಷ್ಟು ಓದಿರಿ

Scroll to Top