ನಾಳೆ ಕುರುಕ್ಷೇತ್ರದ ಮತ್ತೊಂದು ಟ್ರೇಲರ್ ಬಿಡುಗಡೆ!

Picture of Cinibuzz

Cinibuzz

Bureau Report

ಭಾರತದಾದ್ಯಂತ ಸೆನ್ಸೇಷನ್ ಸೃಷ್ಟಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪೌರಾಣಿಕ ಸಿನಿಮಾ ಕುರುಕ್ಷೇತ್ರ. ಬಹುದೊಡ್ಡ ತಾರಾಂಗಣದ ಮೂಲಕ ಸದ್ದು ಮಾಡುತ್ತಿರುವ ಕುರುಕ್ಷೇತ್ರ ಈಗಾಗಲೇ ಆಗಸ್ಟ್ 2 ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ಇತ್ತೀಚಿಗಷ್ಟೇ ಕುರುಕ್ಷೇತ್ರದ ಟ್ರೇಲರ್, ಆಡಿಯೋ ಬಿಡುಗಡೆಯಾಗಿತ್ತು. ಅಲ್ಲದೇ ಕುರುಕ್ಷೇತ್ರದ ಒಂದೊಂದೆ ಲಿರಿಕಲ್ ವಿಡಿಯೋಗಳು ಸಹ ಬಿಡುಗಡೆಯಾಗಿ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿಯೂ ಇದೆ. ಆದರೆ ರಿಲೀಸ್ ಆದ ಟ್ರೇಲರ್ ಗಳು ಮಾತ್ರ  ಚಿತ್ರಕ್ಕೆ ಪಾಸೀಟಿವ್ ಪ್ರಚಾರವನ್ನು ಕೊಡದೇ ಬಹಳಷ್ಟು ಟ್ರೋಲಿಗೆ, ನೆಗೆಟೀವ್ ಕಮೆಂಟುಗಳಿಗೆ ಈಡಾಗುತ್ತಲೇ ಇದೆ. ಟ್ರೇಲರನ್ನು ಅಷ್ಟೇನು ಇಷ್ಟ ಪಡದ ಅಭಿಮಾನಿಗಳು ನಿರಾಸೆಯ ಮೂಡ್ ನಲ್ಲಿ ನಿರ್ಮಾಪಕ ಮುನಿರತ್ನ, ನಿರ್ದೆಶಕರುಗಳ ಮೇಲೆ ಮುನಿಸಿಕೊಳ್ಳುವಂತಾಗಿತ್ತು.

ಅಭಿಮಾನಿಗಳ ಮುನಿಸು, ನಿರಾಸೆಗಳನ್ನು ದೂರ ಮಾಡುವ ಸಲುವಾಗಿ ಕುರುಕ್ಷೇತ್ರ ಚಿತ್ರತಂಡ ಹೊಸದೊಂದು ಟ್ರೇಲರನ್ನು ಬಿಡುಗಡೆ ಮಾಡಲು ನಿರ್ಧರಿಸಿ, ಜುಲೈ 24ರಂದು ಮಧ್ಯಾಹ್ನ 2 ಗಂಟೆಗೆ ಅಧಿಕೃತವಾಗಿ ಲಹರಿ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡುವುದಾಗಿಯೂ ಅನೌನ್ಸ್ ಮಾಡಿದ್ದಾರೆ. ಅಭಿಮಾನಿಗಳು ಸಂತಸದಲ್ಲಿದ್ದು ಅತ್ಯುತ್ತಮ ಟ್ರೇಲರ್ ಬಿಡುಗಡೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಇನ್ನು ಕುರುಕ್ಷೇತ್ರ ಚಿತ್ರವನ್ನು ಮುನಿರತ್ನ ನಿರ್ಮಾಣ ಮಾಡಿದ್ದು, ನಾಗಣ್ಣ ಸೇರಿದಂತೆ ಬಹುತೇಕ ಕುರುಕ್ಷೇತ್ರವನ್ನು ನಿರ್ದೆಶನ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top