ಗಲ್ಲಾ ಪೆಟ್ಟಿಗೆಯಲ್ಲಿ 50 ಕೋಟಿ ಗಟಿ ದಾಟಲಿದೆ ಲಯನ್ ಕಿಂಗ್!

Picture of Cinibuzz

Cinibuzz

Bureau Report

ಕಳೆದ ವಾರ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಕಮಾಲು ಮಾಡುತ್ತಿರುವ ಹಾಲಿವುಡ್ ಸಿನಿಮಾ ಲಯನ್ ಕಿಂಗ್. ಎರಡೇ ದಿನಕ್ಕೆ 30 ಕೋಟಿ ಬಾಚಿಕೊಂಡಿರುವ ಲಯನ್ ಕಿಂಗ್ ಮೊದಲ ದಿನವೇ 11.06 ಕೋಟಿ ಹಾಗೂ ಶನಿವಾರ 19.15 ಕೋಟಿ ಗಲ್ಲಾ ಪೆಟ್ಟಿಗೆಗೆ ಹರಿದು ಬಂದಿದೆ. ಮೂರನೇ ದಿನಕ್ಕೆ 50 ಕೋಟಿ ಗಡಿಯನ್ನು ದಾಟಿರುವ ಈ ಸಿನಿಮಾ ವಾರಾಂತ್ಯದಲ್ಲಿ ಮತ್ತಷ್ಟು ಗಳಿಕೆಯಲ್ಲಿ ಏರಿಕೆಯನ್ನು ಕಂಡಿದೆ.

ಅಪ್ಪ-ಮಗನ ಬಾಂಧವ್ಯದ ಕಥೆ ಹೇಳುವ ಲಯನ್ ಕಿಂಗ್​​ ಚಿತ್ರದ ಹಿಂದಿ ಅವತರಣಿಕೆಯ ಅಫ್ಸಾ ಪಾತ್ರಕ್ಕೆ ಕಿಂಗ್​ ಖಾನ್​​​ ಶಾರುಖ್ ಹಾಗೂ ಸಿಂಬಾ ಪಾತ್ರಕ್ಕೆ ಶಾರುಖ್​ ಪುತ್ರ ಆರ್ಯನ್ ಧ್ವನಿ ನೀಡಿದ್ದಾರೆ. 1994ರಲ್ಲಿ ಇದೇ ಹೆಸರಿನ ಚಿತ್ರವು ಬಿಡುಗಡೆಯಾಗಿತ್ತು. ಅದರ ರಿಮೇಕ್ ಇದಾಗಿದ್ದು, ಸದ್ಯ ಈ ಚಿತ್ರಕ್ಕೆ ಮಕ್ಕಳನ್ನು ಹೆಚ್ಚಾಗಿ ಸೆಳೆಯುತ್ತಿದೆ.

ಇನ್ನಷ್ಟು ಓದಿರಿ

Scroll to Top