ಶ್ವೇತಾ ಚೆಂಗಪ್ಪ ತಾಯಿಯಾದ್ರು!

Picture of Cinibuzz

Cinibuzz

Bureau Report

ಸುಮತಿ ಧಾರವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಚೆಲುವೆ ಶ್ವೇತಾ ಚೆಂಗಪ್ಪ. ಸುಮತಿ ಹಿಟ್ ನ ನಂತರ ಕಾದಂಬರಿ, ಅರುಂಧತಿ ಸೂಪರ್ ಹಿಟ್ ಧಾರವಾಹಿಯಲ್ಲೂ ಶ್ವೇತ ಮಿಂಚಿದ್ದರು. ನಂತರ ಬಿಗ್ ಸ್ಕ್ರೀನ್ ಗೂ ಎಂಟ್ರಿ ಕೊಟ್ಟು ಸ್ಟಾರ್ ತಂಗಿಯ ಪಾತ್ರಗಳಲ್ಲೂ ಅಭಿನಯಿಸಿ ಕನ್ನಡಿಗರ ಮನ ಗೆದಿದ್ದರು. ಜತೆಗೆ ಬಹಳಷ್ಟು ರಿಯಾಲಿಟಿ ಶೋಗಳಿಗೂ ನಿರೂಪಕಿಯಾಗಿಯೂ ಸೇವೆ ಸಲ್ಲಿಸಿದ್ದರು. ಇತ್ತೀಚಿಗೆ ಮಜಾ ಟಾಕೀಸ್ ರಾಣಿಯಾಗಿ ಕಾಣಿಸಿಕೊಳ್ಳುತ್ತಿದ್ದ ಶ್ವೇತ ಬಹಳಷ್ಟು ಜನಪ್ರಿಯತೆಯನ್ನು ಗಳಿಸಿದ್ದರು.

https://www.instagram.com/p/B0OITcajw64/?utm_source=ig_web_copy_link

ಆದರೆ ಕೆಲ ದಿನಗಳಿಂದ ಶ್ವೇತ ಚೆಂಗಪ್ಪ ಮಜಾ ಟಾಕೀಸ್ ನಲ್ಲಿ ಅಷ್ಟೇನೂ ಕಾಣಿಸಿಕೊಳ್ಳುತ್ತಿರಲಿಲ್ಲ. ಅರೇ ಎಲ್ಲೋದ್ರಪ್ಪ ರಾಣಿ ಎಂದು ಅಭಿಮಾನಿಗಳು ಫೀಲ್ ಆಗಿದ್ದರೂ ಕೂಡ. ಸದ್ಯ ಸ್ವತಃ ಶ್ವೇತಾ ಚೆಂಗಪ್ಪ ಅವರೇ ಕಾಣಿಸಿಕೊಂಡು ಅಭಿಮಾನಿಗಳಿಗೆ ಗರ್ಭಿಣಿಯಾಗಿರುವುದಾಗಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅಲ್ಲದೇ ತನ್ನ ಬೇಬಿ ಬಂಪ್ ಫೋಟೋ ಶೂಟ್ ಫೋಟೋಗಳನ್ನು ಇನ್ ಸ್ಟಾಗ್ರಾಂ ಗೂ ಹಂಚಿಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top